*ಚಂದ್ರಯಾನ-3 ಯಶಸ್ವಿ: ಮಕ್ಕಳಿಗೆ ವಿಕ್ರಮ್-ಪ್ರಜ್ಞಾನ್ ಎಂದು ನಾಮಕರಣ ಮಾಡಿ ಸಂಭ್ರಮಿಸಿದ ಕುಟುಂಬ*

ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಭಾರತದ ಇಸ್ರೋ ವಿಜ್ಞಾನಿಗಳ ಸಾಧನೆ ಚಂದ್ರಯಾನ-3 ಯಶಸ್ಸನ್ನು ಪ್ರಪಂಚದಾದ್ಯಂತ ಕೊಂಡಾಡುತ್ತಿದ್ದಾರೆ. ದೇಶಾದ್ಯಂತ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಚಂದ್ರಯಾನ-3 ಯಶಸ್ವಿ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ನವಜಾತ ಶಿಶುಗಳಿಗೆ ಚಂದ್ರಯಾನದ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಹೆಸರಗಳನ್ನು ನಾಮಕರಣ ಮಾಡಲಾಗುತ್ತಿರುವುದು ವಿಶೇಷ. ಯಾದಗಿರಿಯಲ್ಲಿ ಕಳೆದ ಒಂದುತಿಂಗಳ ಅಂತರದಲ್ಲಿ ಒಂದೇ ಕುಟುಂಬದಲ್ಲಿ ಇಬ್ಬರು ಗಂಡುಮಕ್ಕಳು ಜನಿಸಿದ್ದು, ಈ ಮಕ್ಕಳಿಗೆ ಇಂದು ವಿಕ್ರಮ್ ಹಾಗೂ ಪ್ರಜ್ಞಾನ್ ಎಂದು ನಾಮಕರಣ ಮಾಡಲಾಯಿತು. ಈ ಮೂಲಕ ದಂಪತಿ ಚಂದ್ರಯಾನ-3 ಯಶಸ್ವಿ ಸಂಭ್ರಮವನ್ನು ಆಚರಿಸಿದ್ದಾರೆ. … Continue reading *ಚಂದ್ರಯಾನ-3 ಯಶಸ್ವಿ: ಮಕ್ಕಳಿಗೆ ವಿಕ್ರಮ್-ಪ್ರಜ್ಞಾನ್ ಎಂದು ನಾಮಕರಣ ಮಾಡಿ ಸಂಭ್ರಮಿಸಿದ ಕುಟುಂಬ*