*ನಂದಿನಿ ಮಿಲ್ಕ್ ಬೂತ್ ನಲ್ಲಿ ಬೆಂಕಿ ಅವಘಡ: ಆಘಾತಕ್ಕೊಳಗಾದ ಮಾಲೀಕ ಹೃದಯಾಘಾತದಿಂದ ಸಾವು*

ಪ್ರಗತಿವಾಹಿನಿ ಸುದ್ದಿ: ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಅಗ್ನಿ ಅವಘಡ ಸಂಭವಿಸಿddu, ಘಟನೆಯಿಂದ ಆಘಾತಗೊಂಡ ಮಾಲೀಕ ಅಂಗಡಿ ಮುಂದೆಯೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ ಇರುವ ನಂದಿನಿ ಪಾಲರ್ ನಲ್ಲಿ ಈ ಘಟನೆ ನಡೆದಿದೆ. ಕಣಜೇನಹಳ್ಳಿ ಗ್ರಾಮದ ವೆಂಕಟೇಶ್ (55) ಮೃತ ದುರ್ದೈವಿ. ತಡ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಮಿಲ್ಕ್ ಪಾರ್ಲರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿ ವೆಂಕಟೇಶ್ ಅವರಿಗೆ ತಲುಪಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಅವರು ಸ್ಥಳೀಯರ … Continue reading *ನಂದಿನಿ ಮಿಲ್ಕ್ ಬೂತ್ ನಲ್ಲಿ ಬೆಂಕಿ ಅವಘಡ: ಆಘಾತಕ್ಕೊಳಗಾದ ಮಾಲೀಕ ಹೃದಯಾಘಾತದಿಂದ ಸಾವು*