*ತೆಂಗಿನ ಮರ ಮುರಿದುಬಿದ್ದು ಮೂರು ವರ್ಷದ ಮಗು ಸಾವು*

ಪ್ರಗತಿವಾಹಿನಿ ಸುದ್ದಿ: ತೆಂಗಿನ ಮರ ಮುರಿದು ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ. ಘಟನೆಯಲ್ಲಿ ಮಗುವಿನ ತಾಯಿಗೆ ಗಂಭೀರ ಗಾಯಗಳಾಗಿವೆ. ಪೃಥ್ವಿರಾಜ್ ಮೃತ ಮಗು. ಮಗುವಿನ ತಾಯಿ ಮೋನಿಕಾ ತುಂಬು ಗರ್ಭಿಣಿಯಾಗಿದ್ದು, ಹೆರಿಗೆಗಾಗಿ ತವರು ಮನೆಗೆ ಬಂದಿದ್ದರು. ತಾಯಿ ಜೊತೆ ಮೂರು ವರ್ಷದ ಪೃಥ್ವಿರಾಜ್ ಮನೆ ಮುಂದೆ ಆಟವಾಡುತ್ತಿದ್ದಾಗ ಏಕಾಏಕಿ ತೆಂಗಿನ ಮರ ಮುರಿದು ಬಿದ್ದಿದೆ. ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ತಾಯಿ ಮೋನಿಕಾ ಕಾಲಿಗೆ ಗಾಯಗಳಾಗಿದ್ದು, ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. … Continue reading *ತೆಂಗಿನ ಮರ ಮುರಿದುಬಿದ್ದು ಮೂರು ವರ್ಷದ ಮಗು ಸಾವು*