ಸ್ನೇಹಿತನಿಂದಲೇ ಕೊಲೆಯಾದ ಬಿಹಾರಿ ಯುವಕ

ಇಬ್ಬರು ಒಂದೇ ರೂಂನಲ್ಲಿ ವಾಸವಾಗಿದ್ದರು

ಪ್ರಗತಿವಾಹಿನಿ ಸುದ್ದಿ, ಧಾರವಾಡ – ಬಿಹಾರ ಮೂಲದ ಯುವಕನನ್ನು ಆತನ ಸ್ನೇಹಿತನೇ ಕೊಲೆ ಮಾಡಿ ಪರಾರಿಯಾಗಿರುವ  ಘಟನೆ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
Nirani -Senitiser1
ಮೃತನನ್ನು ಬಿಹಾರ ಮೂಲದ ಮೊಹ್ಮದ್ ನದೀಮ್ (೨೩) ಎಂದು ಗುರುತಿಸಲಾಗಿದೆ. ಈತ ಗಾಮನಗಟ್ಟಿಯ  ರಾಜಲಕ್ಷ್ಮಿ ಇಂಡಸ್ಟ್ರೀಸ್ ಹೆಸರಿನ ಕಂಪನಿಯಲ್ಲಿ ಕುಕ್ಕರ್ ತಯಾರಿಸುವ ಕೆಲಸ ಮಾಡುತ್ತಿದ್ದ. ಈತನ ಜೊತೆಗೆ ಬಿಹಾರ ಮೂಲದ ಭವನಕುಮಾರ ಎಂಬಾತನು ಕೆಲಸ ಮಾಡುತ್ತಿದ್ದು, ಇಬ್ಬರು ಒಂದೇ ರೂಂನಲ್ಲಿ ವಾಸವಾಗಿದ್ದರು.
ಆದರೆ ಫೆ. ೧೬ರ ರಾತ್ರಿ ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿ ಮೊಹ್ಮದ್ ನದೀಮ್ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇಂದು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.