World Environment Day

ಕಾಲು ಜಾರಿ ನದಿಗೆ  ಬಿದ್ದ  ಯುವಕ 

ರಾಮದುರ್ಗದ ಹಳೆಯ  ಸೇತುವೆಯಲ್ಲಿ ಘಟನೆ

ಪ್ರಗತಿವಾಹಿನಿ ಸುದ್ದಿ, ರಾಮದುರ್ಗ –ಬೆಳಗಾವಿ ಜಿಲ್ಲೆ ರಾಮದುರ್ಗದ ಹಳೆಯ  ಸೇತುವೆಯಲ್ಲಿ ಕಾಲು ಜಾರಿ ನದಿಗೆ  ಬಿದ್ದ  ಯುವಕ ನಾಪತ್ತೆಯಾಗಿದ್ದಾನೆ.
  ನದಿಯಲ್ಲಿ ನಾಪತ್ತೆ ಆದವ  ಮಂಜುನಾಥ್ ಕೃಷ್ಣಪ್ಪ ಸಾಲಾಪುರ (ಬಂಡಿವಡ್ಡರ).ಈತ 23 ವಯಸ್ಸಿನವನಿದ್ದು, ರಾಮದುರ್ಗದ ಮಡ್ಡಿ ಓಣಿ ನಿವಾಸಿ.
ಯುವಕ ನಾಪತ್ತೆಯಾದ ಸುದ್ದಿ ತಿಳಿದ ಕುಟುಂಬಸ್ಥರ, ಸಂಬಂಧಿಕರ ಆಕ್ರಂದನ ಮುಂಗಿಲು ಮುಟ್ಟಿದೆ.
 ರಾಮದುರ್ಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದುದ್ದು, ಶೋಧ ಕಾರ್ಯ ಮುಂದುವರಿದಿದೆ.