KLE1099 Add

24 ಗಂಟೆಯಲ್ಲಿ ಮರ್ಡರ್ ಆರೋಪಿಗಳು ಅಂದರ್

ಮಾಳಮಾರುತಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲು

Beereshwara 6

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಗಳನ್ನು ಬೆಳಗಾವಿ ಪೊಲೀಸರು 24 ಗಂಟೆಯಲ್ಲಿ ಬಂಧಿಸಿದ್ದಾರೆ.

ರುಕ್ಮಿಣಿ ನಗರದ ನೋಹಾನ್ ತಂದೆ ಮೊಮ್ಮದ್ ನಾಸೀರಿ ಧಾರವಾಡಕರ್ ಎನ್ನುವ 23 ವರ್ಷದ ವ್ಯಕ್ತಿಯನ್ನು ಗಾಂಧಿನಗರದ ಸರ್ವೀಸ್ ರಸ್ತೆ ಪಕ್ಕದ ಹಾಳು ಮನೆಯಲ್ಲಿ ಮರ್ಡರ್ ಮಾಡಲಾಗಿತ್ತು.

ತಲೆಗೆ ಕಲ್ಲಿನಿಂದ ಜಜ್ಜಿ, ಹೊಟ್ಟೆಗೆ, ಎದೆಗೆ, ಮುಖಕ್ಕೆ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಮೃತನ ಸಹೋದರ ಅಫ್ಜಲ್ ಮೊಹಮ್ಮದ ನಾಸೀರ ಧಾರವಾಡಕರ ದೂರು ನೀಡಿದ್ದರು.

ಮಾಳಮಾರುತಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿತ್ತು.
ಎಸಿಪಿ ಮಾರ್ಕೆಟ್ ಎಸ್ ಆರ್ ಕಟ್ಟಿಮನಿ ಮತ್ತು ಪಿಐ ಮಾಳಮಾರುತಿ  ಸುನೀಲ ಪಾಟೀಲರವರ ನೇತೃತ್ವದ ತಂಡ ಈ ಕೊಲೆ ಪ್ರಕರಣದಲ್ಲಿಯ ಆರೋಪಿಗಳನ್ನು 24 ಗಂಟೆಯೊಳಗಾಗಿ ಬಂಧಿಸಿದೆ.

ಇಬ್ರಾಹಿಮ್@ಇಬ್ಬು@ಗೋಲ್ಡಿ ತಂದೆ ಅಮಾನುಲ್ಲಾ ಸಯ್ಯದ ( ೨೬) ಸಾ: ಮಹಾಂತೇಶ ನಗರ ಬೆಳಗಾವಿ, ಮಹ್ಮದ್‌ಜಾಯಿದ್ ಗುಪ್ರಾನ್ ಮನ್ನೂರಕರ (೨೩) ಸಾ: ಉಜ್ವಲ ನಗರ ಬೆಳಗಾವಿ, ಉಲ್ಮಾನ್@ಡುರ್ ಬದ್ರುದ್ದೀನ್ ಯರಗಟ್ಟಿ (೧೯) ಸಾ: ಸುಭಾಷ ಗಲ್ಲಿ ಬೆಳಗಾವಿ ಬಂಧಿತರು.

ನಾಲ್ವರು ಡ್ರಗ್ ಪೆಡ್ಲರ್ ಗಳ ಬಂಧನ; ಬರೋಬ್ಬರಿ 201 ಕೆಜಿ ಗಾಂಜಾ ಸೀಜ್

You cannot copy content of this page