Crease wise (28th Jan)
KLE1099 Add

ಬೆಳಗಾವಿ: ಭಾರಿ ಪ್ರಮಾಣದ ಜಿಲಿಟಿನ್ ಕಂಪೋಸ್ಟರ್ ಮತ್ತಿತರ ಸ್ಫೋಟಕ ಸಾಮಗ್ರಿ ವಶ

ತೇಲಸಂಗ ಗ್ರಾಮದ ಜಮೀನಿನಲ್ಲಿ ಸಂಗ್ರಹಿಸಿಡಲಾಗಿದ್ದ ಭಾರಿ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Anand Ads 3 (3)

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ತೇಲಸಂಗ ಗ್ರಾಮದ ಜಮೀನಿನಲ್ಲಿ ಸಂಗ್ರಹಿಸಿಡಲಾಗಿದ್ದ ಭಾರಿ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಿವರಾಮ ದೊಂಡಿಬಾ ಲೋಕಂಡೆ ಇವರ ಜಮೀನಲ್ಲಿ, ಶಿವರಾಮ ದೊಂಡಿಬಾ ಲೋಕಂಡೆ (ಸಾಃ ತೇಲಸಂಗ ದಡ್ಡಿ, ಜಮೀನ ಮಾಲೀಕ) ಹಾಗೂ ಈರಯ್ಯಾ ರುದ್ರಯ್ಯಾ ಹಿರೇಮಠ (ಸಾ: ಯಕ್ಕುಂಡಿ ತಾಃ-ಬಬಲೇಶ್ವರ), ಬಾಳೇಶ ಮಲಕಪ್ಪಾ ಅನಂತಪೂರ (ಸಾ: ಗೋಟೆ ತಾ ಜಮಖಂಡಿ) ಹಾಗೂ ಹಿಟಾಚಿಯ ಚಾಲಕ ವಿಜಯ ಲಾಲು ಜಾಧವ (ಸಾಃ- ಜಾಲಿಹಾಳ ತಾಂಡಾ ತಾಃ- ಬಸವನ ಬಾಗೇವಾಡಿ) ಇವರು ಸರ್ಕಾದ ಯಾವುದೇ ಅಧಿಕೃತವಾದ ಪರವಾನಗಿ ಇಲ್ಲದೆ ಜಿಲೆಟಿನ್  ಎನ್ನುವ ಸ್ಫೋಟಕ ಪದಾರ್ಥಗಳನ್ನು ಸಂಗ್ರಹಿಸಿಟ್ಟಿದ್ದರು.

ಈ ಬಗ್ಗೆ ಮಾಹಿತಿ ಪ್ರಕಾರ  ಎಸ್.ಪಿ,  ಹೆಚ್ಚುವರಿ ಎಸ್.ಪಿ, ಡಿ.ಎಸ್.ಪಿ  ಅಥಣಿ ಉಪ ವಿಭಾಗ, ಸಿಪಿಐ   ಅಥಣಿ ವೃತ್ತ  ಅರವರ ಮಾರ್ಗದರ್ಶನದಲ್ಲಿ, ಶಿವರಾಜ ನಾಯಿಕವಾಡಿ ಪಿ.ಎಸ್.ಐ ಐಗಳಿ ಪೋಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಬಿ.ಬಿ.ಪಾಟೀಲ, ಜಿ.ಪಿ.ರಾಠೋಡ,  ಎಸ್.ಬಿ.ಕರೋಶಿ,   ಎಸ್.ಬಿ.ನಾಯಿಕ  ದಾಳಿ ನಡೆಸಿದರು.

ಜಿಲೆಟಿನ ಟ್ಯೂಬ್ ತುಂಬಿದ ಮೂರು ರಟ್ಟಿನ ಬಾಕ್ಸಗಳು ಅದರ ಮೇಲೆ ಸುಪರ್ ಪವರ 90 ಎಂದು ಬರೆದಿದ್ದು  7500 ರೂ. ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ Super power 90 (25mm X 125 grams) Solar Industries India Limited Chakdoh Bazargaon Nagapur India ಕಂಪನಿಯ ಜಿಲೆಟಿನ   ಸ್ಫೋಟಕ ಪದಾರ್ಥಗಳು ಖುಲ್ಲಾ 128 (1600ರೂ.) ಹಾಗೂ ನೀಲಿ ಬಣ್ಣದ ಸ್ವರಾಜ 744 ಟ್ರಾಕ್ಟರ ನಂ: ಕೆಎ-28-ಟಿಎ-0403 ನೇದ್ದು ಮತ್ತು ಕಂಪೋಸ್ಪರ ಜೋಡಿಸಿದ್ದು (3,00,000 ರೂ., ನೀಲಿ ಬಣ್ಣದ ಪವರ್ ಟೆಕ್ ಟ್ರ್ಯಾಕ್ಟರ್ ನಂ: ಕೆಎ-28-ಟಿಬಿ-1526 ನೇದ್ದು ಕಂಪೋಸ್ಪರ್ ಜೋಡಿಸಿದ್ದು (3,00,000 ರೂ.), ಹಳದಿ ಬಣ್ಣದ ಸನ್ನಿ ಕಂಪನಿಯ ಹಿಟಾಚ್ಚಿ  ( 75,೦೦,೦೦೦ ರೂ)  ಗಳನ್ನು ಜಪ್ತ ಮಾಡಲಾಗಿದೆ.

ಆರೋಪಿತರ ಮೇಲೆ ಐಗಳಿ ಪೊಲೀಸ ಠಾಣಾ ಅಪರಾಧ ಸಂಖ್ಯೆ 29/2021 ಕಲಂ 9(ಬಿ) ಎಕ್ಸ್‌ಪ್ಲೋಜಿವ್ ಆ್ಯಕ್ಸ್ 1884 ಮತ್ತು ಕಲಂ: 336 286 ಐಪಿಸಿ ನೇದ್ದಕ್ಕೆ ಪ್ರಕರಣ ಧಾಖಲ ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.