Advertisement -Home Add

ಲಂಚ ಪ್ರಕರಣ: ಪಿಡಿಓ ಬಂಧನ

ಕಲಕಾಂಬ ಗ್ರಾಮಪಂಚಾಯಿತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಆಸ್ತಿ ವಾಟ್ನಿ ಮಾಡಿ, ಉತಾರ ನೀಡಲು 5 ಸಾವಿರ ರೂ. ಲಂಚ ಸ್ವೀಕರಿಸುವಾಗ ಕಲಕಾಂಬ ಗ್ರಾಮ ಪಂಚಾಯಿತಿ ಪಿಡಿಒ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಫಿರ್ಯಾದಿ ರೋಹಣ  ಚಂದ್ರಕಾಂತ ಪಾಟೀಲ್, (ಸಾ: ಕಲಕಾಂಬ ತಾ:ಜಿ: ಬೆಳಗಾವಿ) ತಂದೆ ಮತ್ತು ದೊಡ್ಡಪ್ಪ ಹೆಸರನಲ್ಲಿ ಜಂಟಿಯಾಗಿರುವ  ಆಸ್ತಿ ನಂ.೧೨೪ಸಿ ಮತ್ತು ಅಸ್ತಿ ನಂ. ೩೬೩ ನೆದ್ದವುಗಳನ್ನು ವಾಟ್ನಿ ಮಾಡಿಕೊಂಡು ನಂತರ ಫಿರ್ಯಾದಿಯ ತಂದೆಯ  ಪಾಲಿಗೆ ಬಂದ ಮನೆ ನಂ.೧೨೪ ಸಿ ನೆದ್ದನ್ನು ಪಂಚಾಯತಿಯಲ್ಲಿ ದಾಖಲು ಮಾಡಿ ಉತಾರ ನೀಡಲು ಅರ್ಜಿ ಸಲ್ಲಿಸಿದ ನಂತರ  ಸರ್ಕಾರಿ ನೌಕರನಾದ  ಶ್ರೀಶೈಲ ದೇವೆಂದ್ರ ನಾಗಠಾಣ, ಪಂಚಾಯತ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ), ಕಲಕಾಂಬ ಗ್ರಾಮ ಪಂಚಾಯತ ಇವರು ರೂ.೫೦೦೦ ಲಂಚ ಹಣವನ್ನು ಬೇಡಿಕೆ ಇಟ್ಟಿದ್ದ.

ಬಿ.ಎಸ್.ನೇಮಗೌಡ, ಪೊಲೀಸ್ ಅಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ ಮಾರ್ಗದರ್ಶನದಲ್ಲಿ  ಶರಣಪ್ಪ, ಪೊಲೀಸ್ ಉಪಾಧೀಕ್ಷಕರು ದೂರು ದಾಖಲಿಸಿಕೊಂಡಿದ್ದಾರೆ.  ಎ.ಎಸ್‌ಗೂದಿಗೊಪ್ಪ, ಪೊಲೀಸ್ ಇನ್ಸ್ಪೆಕ್ಟರ್, ಹಾಗೂ  ಹೆಚ್.ಸುನೀಲ್‌ಕುಮಾರ, ಪೊಲೀಸ್ ಇನ್ಸ್ಪೆಕ್ಟರ್, ಎಸಿಬಿ ಪೊಲೀಸ್ ಠಾಣೆ  ಹಾಗೂ ಸಿಬ್ಬಂದಿ ಕಾರ್ಯಚರಣೆಯಲ್ಲಿ ತೊಡಗಿದ್ದು,  ಸರ್ಕಾರಿ ನೌಕರನಾದ   ಶ್ರೀಶೈಲ ದೇವೆಂದ್ರ ನಾಗಠಾಣ, ಪಂಚಾಯತ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ), ಕಲಕಾಂಬ ಗ್ರಾಮ ಪಂಚಾಯತ ರೂ.೫೦೦೦ ಲಂಚದ ಹಣವನ್ನು ಸ್ವೀಕರಿಸುತ್ತಿರುವ ವೇಳೆಯಲ್ಲಿ ಸಿಕ್ಕಿದ್ದು,  ಆತನನ್ನು ವಶಕ್ಕೆ ಪಡೆದು  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.