Yoga add Final 1
KLE1099 Add

ಮೂರು ಪುಟ್ಟ ಮಕ್ಕಳನ್ನು ಬಾವಿಗೆ ತಳ್ಳಿ ಸಾಯಿಸಿದ ತಂದೆ

ಪತ್ನಿಯೊಂದಿಗೆ ತಾನೂ ಆತ್ಮಹತ್ಯೆಗೆ ಯತ್ನ

GIT Add 3
Beereshwara add 12

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಹೆತ್ತ ತಂದೆಯೇ ಮೂರು ಮಕ್ಕಳನ್ನು ಬಾವಿಗೆ ತಳ್ಳಿ ಹತ್ಯೆ ಮಾಡಿರುವ ಘೋರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ವಿಜೇತ್ ಶೆಟ್ಟಿಗಾರ್ ತನ್ನ ಮುದ್ದಾದ ಮೂವರು ಮಕ್ಕಳನ್ನು ಹತ್ಯೆ ಮಾಡಿದ್ದಾನೆ. ಕೌಟುಂಬಿಕ ಕಲಹಕ್ಕೆ ಮೂವರು ಪುಟಾಣಿ ಮಕ್ಕಳು ಸಾವನ್ನಪ್ಪಿದ್ದಾರೆ. ರಶ್ಮಿತಾ, ಉದಯ್, ದಕ್ಷಿತ್ ಮೃತ ಮಕ್ಕಳು.

ಮೊದಲು ಮೂವರು ಮಕ್ಕಳನ್ನು ಬಾವಿ ಬಳಿ ಕರೆತಂದು ಬಾವಿಗೆ ತಳ್ಳಿ ಸಾಯಿಸಿರುವ ವಿಜೇಶ್ ಶೆಟ್ಟಿಗಾರ್, ಬಳಿಕ ಪತ್ನಿ ಲಕ್ಷ್ಮಿಯನ್ನು ಎಳೆದುಕೊಂಡು ಬಂದು ಪತ್ನಿಸಮೇತ ತಾನೂ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಲಾಟೆ ಕೇಳಿ ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿ ಬಂದು ವಿಜೇತ್ ಹಾಗೂ ಆತನ ಪತ್ನಿಯನ್ನು ರಕ್ಷಿಸಿದ್ದಾರೆ.

ಅಷ್ಟೊತ್ತಿಗಾಗಲೇ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಎಂಆರ್ ಪಿಎಲ್ ನಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದ ವಿಜೇತ್ ಕಳೆದ ಮೂರು ವರ್ಷಗಳಿಂದ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದ. ಇದೇ ಕಾರಣಕ್ಕೆ ಪತಿ-ಪತ್ನಿ ನಡುವೆ ಜಗಳವಾಗುತ್ತಿತ್ತು. ದುಡಿದು ಹೆಂಡತಿ-ಮಕ್ಕಳನ್ನು ಸಾಕಿ ಸಲಹುವ ಬದಲು ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಸಾಯಿಸಿದ್ದಾನೆ.

ಮಂಗಳೂರು ಉತ್ತರ ಎಸಿಪಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Home add- Bottom