Advertisement

ಆಟವಾಡಲು ತೆರಳಿದ್ದ ಮಕ್ಕಳಿಬ್ಬರ ದುರ್ಮರಣ

ಹೊಲದಲ್ಲಿ ಆಟವಾಡುತ್ತಿದ್ದಾಗ ಪಕ್ಕದಲ್ಲೇ ಹರಿಯುತ್ತಿದ್ದ ಹಳ್ಳದಲ್ಲಿ ಮಕ್ಕಳು ಬಿದ್ದಿದ್ದಾರೆ

ಪ್ರಗತಿವಾಹಿನಿ ಸುದ್ದಿ, ಮುರಗೋಡ – ಆಟವಾಡಲು ಹೋಗಿದ್ದ ಮಕ್ಕಳಿಬ್ಬರು ಹಳ್ಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮತ್ತಿಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಯರಗಟ್ಟಿ ಸಮೀಪದ ತೋಟದ ಮನೆಯ ಬಳಿ ಹೊಲದಲ್ಲಿ ಆಟವಾಡುತ್ತಿದ್ದಾಗ ಪಕ್ಕದಲ್ಲೇ ಹರಿಯುತ್ತಿದ್ದ ಹಳ್ಳದಲ್ಲಿ ಮಕ್ಕಳು ಬಿದ್ದಿದ್ದಾರೆ. 6 ವರ್ಷದ ಸಂಜೀತಾ ದುರ್ಗಣ್ಣವರ್ ಹಾಗೂ 8 ವರ್ಷದ ಸತೀಶ್ ದುರ್ಗಣ್ಣವರ್ ಮೃತರು. ವೀರೇಶ್ ದುರ್ಗಣ್ಣವರ್ ಹಾಗೂ ನಾರಾಯಣ ದುರ್ಗಣ್ಣವರ್ ಎನ್ನುವ 10 ವರ್ಷದ ಮಕ್ಕಳಿಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುರಗೋಡ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.