ಸಾಲಬಾದೆಯಿಂದ ನೊಂದ ರೈತ ಆತ್ಮಹತ್ಯೆಗೆ ಶರಣು

5 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದರು

ಪ್ರಗತಿವಾಹಿನಿ ಸುದ್ದಿ,  ನಂದೇಶ್ವರ : ಅಥಣಿ ತಾಲೂಕಿನ ನಂದೇಶ್ವರ ಗ್ರಾಮದ ರೈತ ಶ್ರೀಶೈಲ ಚನ್ನಯ್ಯ ಹಿರೇಮಠ (42 ವರ್ಷ)   ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೇದ ವರ್ಷ ಆಗಸ್ಟ್ ‌ತಿಂಗಳಲ್ಲಿ ಕೃಷ್ಣಾ ನದಿಗೆ ಭೀಕರ ಪ್ರವಾಹ ಬಂದಾಗ  ಹೊಲದಲ್ಲಿ ಬೆಳೆದ ಕಬ್ಬು ಮುಳುಗಿ ನಾಶವಾಗಿದೆ. ಇದರಿಂದ ಮನನೊಂದು ತಾನು ಮಾಡಿರುವ ಸಾಲಕ್ಕೆ ಹೆದರಿ ಫೆಬ್ರವರಿ 11 ರಂದು ಮುಂಜಾನೆ ಹೊಲಕ್ಕೆ ತೆರಳಿ ಅಲ್ಲಿ ಇಟ್ಟಿದ್ದ ಕೀಟನಾಶಕ ಸೇವಿಸಿ  ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಕೀಟನಾಶಕ ಸೇವನೆಯಿಂದ ತನ್ನ ಹೊಲದಲ್ಲಿ  ಒದ್ದಾಡುತ್ತಿದ್ದ ರೈತನನ್ನು ನೋಡಿ ಗ್ರಾಮಸ್ಥರು ಚಿಕಿತ್ಸೆಗಾಗಿ  ಅಥಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ಆರೋಗ್ಯದಲ್ಲಿ ಚೇತರಿಕೆ ಕಾಣದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಿರಜ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಬುಧವಾರ ಮುಂಜಾನೆ  ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸಿಂಡಿಕೇಟ್ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಕೈಗಡ ಸೇರಿದಂತೆ 5 ಲಕ್ಷಕ್ಕೂ ಅಧಿಕ ಸಾಲಮಾಡಿದ್ದಾರೆಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Nirani -Senitiser1