Yoga add Final 1
KLE1099 Add

ಬೆಳಗಾವಿ : ಮಹಿಳೆಯರಿಗೆ ಪಂಗನಾಮ ಹಾಕಿದ್ದ ಖತರನಾಕ್ ಆಸಾಮಿ ಪೊಲೀಸ್ ಬಲೆಗೆ

ಮಹಿಳೆಯರಿಗೆ ಆಮಿಷ ತೋರಿಸಿ ಲಕ್ಷಾಂತರೂ ಎಗರಿಸಿದ್ದ

GIT Add 3
Beereshwara add 12

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸುಲಭವಾಗಿ ಮನೆಯಲ್ಲಿದ್ದೇ ಹಣಗಳಿಸಬಹುದು ಎಂದು ಆಮಿಷ ತೋರಿಸಿ ಮಹಿಳೆಯರಿಗೆ ಲಕ್ಷಾಂತರ ರೂ. ಟೋಪಿ ಹಾಕಿದ್ದ ವ್ಯಕ್ತಿಯ ವಿರುದ್ಧ ಬೆಳಗಾವಿಯ ಟಿಳಕವಾಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಿವಮೊಗ್ಗ ಮೂಲದ ವೃಷಭ ದಿವಾಕರ ಆಳ್ವ (54) ಎನ್ನುವ ವ್ಯಕ್ತಿ,  ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಮಹಿಳೆಯರಿಗೆ ಆಮಿಷ ತೋರಿಸಿ ಲಕ್ಷಾಂತರೂ ಎಗರಿಸಿದ್ದ.

ನನಗೆ ಇನ್ಫೋಸಿಸ್ ಸುಧಾ ಮೂರ್ತಿ, ಧರ್ಮಸ್ಥಳದ ಡಾ. ವೀರೇಂದ್ರ ಹೆಗಡೆ ಸೇರಿದಂತೆ ದೊಡ್ಡ ದೊಡ್ಡ ವ್ಯಕ್ತಿಗಳು, ಕಂಪನಿಗಳು ಪರಿಚಯ  ಎಂದು ಹೇಳಿಕೊಂಡು ಗೃಹಿಣಿಯರನ್ನು ಯಾಮಾರಿಸಿ  ಈತ ಹಣ ಲಪಟಾಯಿಸಿದ್ದ.

ಮಹಿಳೆಯರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿ ವಿವಿಧ ಕೆಲಸಗಳಿಗೆ ಇಂತಿಷ್ಟು ಹಣ ಎಂದು ಮೋಸ‌ ಮಾಡಿದ್ದಾನೆ ಎಂದು ಹಣ ನೀಡಿದ‌ ಮಹಿಳೆಯರು ದೂರಿದ್ದಾರೆ.  ಸುಧಾ ರಾಘವೇಂದ್ರ ಬಡಿಗೇರ ಎನ್ನುವ ಮಹಿಳೆ ತಾನು ಹಣ ಕೊಟ್ಟಿದ್ದಲ್ಲದೆ ಇನ್ನೂ 17 ಮಹಿಳೆಯರಿಂದ ಹಣ ಕೊಡಿಸಿದ್ದಾಳೆ. ಒಟ್ಟೂ 1.39 ಲಕ್ಷ ರೂ. ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನಮ್ಮ ಕಸ್ಟಮರ್ ಜೊತೆಗೆ ಮಾತನಾಡಿದರಾಯಿತು. ಅದಕ್ಕೆ ತರಬೇತಿಯನ್ನೂ ನೀಡುತ್ತೇವೆ. ತಿಂಗಳಿಗೆ 18 ಸಾವಿರ ರೂ. ಸಂಬಳ ಕೊಡುತ್ತೇವೆ ಎಂದು ನೊಂದಣಿ ಫೀ, ಲ್ಯಾಪ್ ಟಾಪ್ ಬಿಲ್, ಸೈಕಲ್, ಸ್ಕೂಟಿ ಬಿಲ್ ಎಂದು ಹಣ ಪಡೆದಿದ್ದಾನೆ.

ಇದೀಗ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಗೊತ್ತಾಗಿದೆ.

ಬೆಳಗಾವಿ ಬಳಿ ತಲ್ವಾರ್ ತೋರಿಸಿ ವ್ಯಕ್ತಿಯಿಂದ ಚಿನ್ನಾಭರಣ ಸುಲಿಗೆ; ಬೆಚ್ಚಿ ಬೀಳಿಸಿದ ಘಟನೆ

ಮೊದಲ ಲೈಂಗಿಕ ಕ್ರಿಯೆ ವೇಳೆ ಆತ ನನಗೆ ನಶೆ ಏರಿಸಿದ್ದ; ನಟನ ವಿರುದ್ಧ ಸಾಕ್ಷ್ಯ ನುಡಿದ ಮಾಜಿ ಗೆಳತಿ

Home add- Bottom