GIT add 2024-1
Laxmi Tai add
Beereshwara 33

ಬೆಳಗಾವಿಯಲ್ಲಿ ಮತ್ತೆ ಹನಿಟ್ರ್ಯಾಪ್: ಐವರ ಬಂಧನ

ಮಾಳಮಾರುತಿ ಠಾಣೆ ಪೊಲೀಸರ ಕಾರ್ಯಾಚರಣೆ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಬೆಳಗಾವಿ ನಗರದಲ್ಲಿ ಹನಿ ಟ್ರ್ಯಾಪ್ ಮೂಲಕ ದರೋಡೆಗೆ ಯತ್ನಿಸಿದ 5 ಜನರ ಗ್ಯಾಂಗ್ ನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ವೀರಭದ್ರ ನಗರದ ಎ. ಎಮ್. ಮುಜಾವರ ಅವರಿಗೆ ಬಟ್ಟೆ ಅಂಗಡಿಯಲ್ಲಿರುವ ವ್ಯವಹಾರದ ಸಲುವಾಗಿ ಬಿಬಿಆಯೇಶಾ ಶೇಖ ಎಂಬ ಮಹಿಳೆಯು 6 ಲಕ್ಷ ರೂಪಾಯಿ ಹಣ ಕೊಡಬೇಕಿತ್ತು.

ಡಿ.2ರಂದು ಮುಜಾವರ ವ್ಯವಹಾರಕ್ಕಾಗಿ ಮಹಾಂತೇಶನಗರದ ಎಸ್‌ಬಿಐ ಬ್ಯಾಂಕ್  ಶಾಖೆಗೆ ಬಂದಿದ್ದರು. ಅವರು ಕೆಲಸ ಮುಗಿಸಿ ಹೊರಬಂದಾಗ ಬಿಬಿಆಯೇಶಾ ಮತ್ತು ಹೀನಾ ಎಂಬ ಮಹಿಳೆಯರು ಮುಜಾವರ ಅವರ ಕಾರ್ ಹತ್ತಿರ ಕಾಯುತ್ತ ನಿಂತಿದ್ದರು.

ದೂರುದಾರ ಬಂದ ತಕ್ಷಣ ನಿಮಗೆ ನಾವು ಕೊಡಬೇಕಾದ ಹಣವು ಮನೆಯಲ್ಲಿದೆ, ಬನ್ನಿ ಕೊಡುತ್ತೇವೆ ಎಂದು ಕರೆದುಕೊಂಡು ಹೋದರು.

ಮನೆಯಲ್ಲಿ  ಅಲೀಶಾನ್ ಶಾಬುದ್ದಿನ್ ಸಯ್ಯದ ಸಾಃ ಕಾರ್ ಸ್ಟ್ರೀಟ್ ಕ್ಯಾಂಪ್, ಬೆಳಗಾವಿ,  ಅಖೀಬ ಅಲ್ಲಾಭಕ್ಷ ಬೇಪಾರಿ ಸಾಃ ಮಾರ್ಕೆಟ್ ಸ್ಟ್ರೀಟ್ ಕ್ಯಾಂಪ್ ಬೆಳಗಾವಿ,  ಸಲ್ಮಾನ ಗುಲಾಜ್ ಬೇಗ ಸಾಃ ಬೀಪ್ ಬಝಾರ್ ಸ್ಟ್ರೀಟ್, ಕ್ಯಾಂಪ್, ಬೆಳಗಾವಿ ಹಾಗೂ ಒಬ್ಬ  ಅಪ್ರಾಪ್ತ ಬಾಲಕ ಕಾಯುತ್ತಿದ್ದರು.

ಇವರೊಂದಿಗೆ ಬಿಬಿಆಯೇಶಾ ಅಬ್ದುಲ್‌ಸತ್ತಾರ ಶೇಖ ಸಾಃ ಮಹಾಂತೇಶ ನಗರ ಬೆಳಗಾವಿ  ಮತ್ತು ಹೀನಾ ಅಕ್ಬರ್ ಸವನೂರ ಸಾಃ ಆಶ್ರಯ ಕಾಲನಿ ರುಕ್ಮಿಣಿ ನಗರ ಬೆಳಗಾವಿ -ಇವರೆಲ್ಲ ಸೇರಿ ಮುಜಾವರ ಅವರನ್ನು ಮನೆಯಲ್ಲಿ ಕೂಡಿ ಹಾಕಿ ಬಟ್ಟೆಯನ್ನು ಬಿಚ್ಚಿಸಿ ನಗ್ನಗೊಳಿಸಿ ಆತನ ಹತ್ತಿರ ಇದ್ದ ರೂ.16,500 ರೂ. ಹಣ ಮತ್ತು ಕೈ ಗಡಿಯಾರ ಕಸಿದುಕೊಂಡು ನಗ್ನ ವಿಡಿಯೋ ಮಾಡಿ 5 ಲಕ್ಷ ರೂಪಾಯಿ ಕೊಡಬೇಕು. ಇಲ್ಲದಿದ್ದರೆ ರೇಪ್ ಕೇಸ್ ಹಾಕುತ್ತೇವೆ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇವೆ ಎಂದು ಬೆದರಿಸಿದರು.

Emergency Service

ಮನೆಗೆ ಹೋಗಿ 2.50 ಲಕ್ಷ ರೂ. ನೀಡುತ್ತೇನೆ ಎಂದು ಹೇಳಿ ಅಲ್ಲಿಂದ ಬಂದ ಮುಜಾವರ ಮಾಳಮಾರುತಿ ಠಾಣೆಗೆ ದೂರು ನೀಡಿದರು.

ತಕ್ಷಣ ದೂರನ್ನು ದಾಖಲಿಸಿಕೊಂಡ ಮಾಳಮಾರುತಿ ಠಾಣೆ ಇನಸ್ಪೆಕ್ಟರ್ ಬಿ. ಆರ್. ಗಡ್ಡೇಕರ, ಈ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಎಸಿಪಿ  ಎನ್. ವ್ಹಿ. ಬರಮನಿ  ನೇತೃತ್ವದಲ್ಲಿ ಅಧೀನ ಸಿಬ್ಬಂದಿಯಾದ ಹೊನ್ನಪ್ಪ ತಳವಾರ ಪ್ರೋ.ಪಿ.ಎಸ್.ಐ., ಸಿ.ಹೆಚ್ಸಿ.  ಎಮ್ ಜಿ ಕುರೇರ್,  ಕೆಂಪಣ್ಣ ಗೌರಾಣಿ,  ಲತೀಪ ಮುಶಾಪುರಿ, ವ್ಹಿ. ಹೆಚ್ ದೊಡಮನಿ,   ಶಿವಶಂಕರ ಗುಡದಯ್ಯಗೋಳ, ಮಂಜುನಾಥ ಮೇಲಸರ್ಜಿ ಮತ್ತು ಮಹಿಳಾ ಸಿಬ್ಬಂದಿ ಜೆ. ಕೆ. ಲಡಂಗಿ,  ಎಸ್. ಎ. ಗಾಳಿ ಅವರೊಂದಿಗೆ ದಾಳಿ ನಡೆಸಿ ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆದರು.

ಅವರಿಂದ ರೂ.16,500 ರೂ. ಹಣ, ಕೈ ಗಡಿಯಾರ, ವಿಡಿಯೋ ಮಾಡಲು ಬಳಸಿದ ಮೊಬೈಲ್‌, ಅಪರಾಧಕ್ಕೆ ಉಪಯೋಗಿಸಿದ ೩ ಮೋಟರ್ ಸೈಕಲ್‌ಗಳನ್ನು ಜಪ್ತು ಮಾಡಿಕೊಂಡು ಆರೋಪಿತರೆಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

ಈ ಹನಿಟ್ರ್ಯಾಪ್ ಮತ್ತು ದರೋಡೆ ಮಾಡಲು ಪ್ರಯತ್ನಿಸಿದ ಗ್ಯಾಂಗ್‌ನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ  ಎನ್ ವ್ಹಿ ಬರಮನಿ ಎ.ಸಿ.ಪಿ ಮಾರ್ಕೆಟ್ ಮತ್ತು  ಬಿ. ಆರ್. ಗಡ್ಡೇಕರ್ ಪಿಐ ಮಾಳಮಾರುತಿ ಇವರ ನೇತೃತ್ವದ ತಂಡವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

ಕೆಲ ದಿನಗಳ ಹಿಂದಿನ ಸುದ್ದಿ –

ಬೆಳಗಾವಿಯಲ್ಲೊಂದು ಹನಿಟ್ರ್ಯಾಪ್ ಗ್ಯಾಂಗ್ ಅಂದರ್

Bottom Add3
Bottom Ad 2