Yoga add Final 1
KLE1099 Add

ಪತ್ನಿ ಹತ್ಯೆಗೈದು, ಮಗಳಿಗೂ ಚಾಕು ಇರಿದ; ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ ಭೂಪ

ಕೊಲೆ ಬಳಿಕ ಆತ್ಮಹತ್ಯೆಗೆ ಭಯಗೊಂಡ ಪಾಪಿ

GIT Add 3
Beereshwara add 12

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರೀತಿಸಿ  ವಿವಾಹವಾಗಿದ್ದ ಪತ್ನಿಯನ್ನು ಹತ್ಯೆಗೈದ ಪತಿ ಮಹಾಶಯ ಬಳಿಕ ಮಗಳನ್ನು ಕೊಲೆ ಮಾಡಲು ಯತ್ನಿಸಿ, ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ವಿಷಯ ತಿಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಧನೇಂದ್ರ ಎಂಬಾತ ತನ್ನ ಪತ್ನಿ ಅನಸೂಯ (42)ಳನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ನಂತರ ಮಗಳಿಗೂ ಚಾಕು ಇರಿದಿದ್ದಾನೆ. ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಸಾಯಲು ಭಯವಾಗಿದೆ. ರಾತ್ರಿಯಿಡಿ ಪತ್ನಿ ಮೃತದೇಹದ ಬಳಿಯೇ ಕುಳಿತಿದ್ದಾನೆ. ಬೆಳಿಗ್ಗೆಯಾಗುವಷ್ಟರಲ್ಲಿ ಅಪ್ಪನಿಂದ ಚಾಕು ಇರಿತಕ್ಕೊಳಗಾಗಿದ್ದ ಮಗಳಿಗೆ ಪ್ರಜ್ಞೆ ಬಂದಿದೆ. ಮಗಳು ಬದುಕಿರುವುದು ನೋಡಿ ಆಕೆಯನ್ನು ಹತ್ಯೆಮಾಡಲು ಮತ್ತೆ ಯತ್ನಿಸಿದ್ದಾನೆ. ಮಗಳು ಜೋರಾಗಿ ಕಿರುಚಲಾರಂಭಿಸಿದ್ದಾಳೆ.

ಇದರಿಂದ ಗಾಬರಿಯಾದ ಧನೇಂದ್ರ ಬೇರೆ ದಾರಿ ಕಾಣದೇ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ನಾನು ಪತ್ನಿಯನ್ನು ಕೊಲೆ ಮಾಡಿದ್ದೇನೆ ಎಂದು ತಿಳಿಸಿದ್ದಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಚಾರಣೆ ವೇಳೆ ಧನೇಂದ್ರ ತಾನು ತನ್ನ ಪತ್ನಿ 13 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದೆವು. ಚೆನ್ನಾಗಿಯೇ ಇದ್ದೆವು. ಆದರೆ ಇತ್ತೀಚೆಗೆ ನಾನು 1.20 ಲಕ್ಷ ಸಾಲ ಮಾಡಿದ್ದೆ. ಸಾಲದ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಮುಂಜಾನೆ ಮೂರು ಗಂಟೆ ವೇಳೆ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದಿದ್ದೇನೆ ಎಂದು ಬಾಯ್ಬಿಟ್ಟಿದ್ದಾನೆ. ಮಗಳ ಹತ್ಯೆಗೂ ಯತ್ನಿಸಿದ್ದು, ಆದರೆ ಸಾಧ್ಯವಾಗಿಲ್ಲ. ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಧೈರ್ಯಬರಲಿಲ್ಲ ಎಂದು ಹೇಳಿದ್ದಾನೆ.
ಮಹಾ ಸಿಎಂ ಉದ್ಧವ್ ಠಾಕ್ರೆಗೆ ಕೊರೊನಾ ಸೋಂಕು

Home add- Bottom