

ಪ್ರಗತಿವಾಹಿನಿ ಸುದ್ದಿ; ಮೈಸೂರು: ಮೊರಾರ್ಜಿ ವಸತಿ ಶಾಲೆಯ ಶಿಕ್ಷಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಬಿಜೆಪಿ ಸದಸ್ಯೆ ಸೇರಿದಂತೆ ನಾಲ್ವರು ಆರೋಪಿಗಳನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ.
ಗಾಯತ್ರಿ ಮುರುಗೇಶ್ ಬಂಧಿತ ನಗರಸಭೆ ಸದಸ್ಯೆ. 6 ತಿಂಗಳ ಹಿಂದೆ ನಂಜನಗೂಡಿನ ಮೊರಾರ್ಜಿ ವಸತಿ ಶಾಲೆಯ ಶಿಕ್ಷಕಿ ಸುಲೋಚನ ಎಂಬುವವರ ಬರ್ಬರ ಹತ್ಯೆ ನಡೆದಿತ್ತು. ಈ ಪ್ರಕರಣ ಸಂಬಂಧ ಇದೀಗ ನಗರಸಭೆ ಸದಸ್ಯೆ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
7 ವರ್ಷಗಳ ಹಿಂದೆ ಪತಿ ಕಳೆದುಕೊಂಡಿದ್ದ ಶಿಕ್ಷಕಿ ಸುಲೋಚನ ಒಂಟಿಯಾಗಿ ವಾಸವಾಗಿದ್ದರು. ನಗರಸಭೆ ಸದಸ್ಯೆ ಗಾಯತ್ರಿ ಪತಿ ಮುರುಗೇಶ್, ಸುಲೋಚನ ಜತೆ ಸಲುಗೆಯಿಂದ ಇದ್ದ ಎನ್ನಲಾಗಿದೆ. ತನ್ನ ಪತಿ ಜತೆ ಶಿಕ್ಷಕಿ ಸುಲೋಚನ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ನಗರಸಭೆ ಸದಸ್ಯೆ ಗಾಯತ್ರಿ ಸುಪಾರಿ ಕೊಟ್ಟು ಶಿಕ್ಷಕಿಯನ್ನು ಕೊಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಇದೀಗ ಗಾಯತ್ರಿ ಸೇರಿ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಿಮ್ಮಿಂದ ಆಗಲ್ಲ ಎಂದರೆ ಹೇಳಿ…ಗೃಹ ಸಚಿವ ಅರಗ ಜ್ಞಾನೇಂದ್ರಗೆ ತರಾಟೆಗೆ ತೆಗೆದುಕೊಂಡ ಅಮಿತ್ ಶಾ

ನಿಖರ, ನಿರಂತರ ಮತ್ತು ನಿಷ್ಪಕ್ಷಪಾತ ಸುದ್ದಿಗಳಿಗಾಗಿ ಪ್ರಗತಿವಾಹಿನಿ ಗ್ರುಪ್ ಸೇರಲು NEWS ಎಂದು ಟೈಪ್ ಮಾಡಿ 8197712235 ನಂಬರ್ ಗೆ ವಾಟ್ಸಪ್ ಮಾಡಿ.
ದಯವಿಟ್ಟು ನಮ್ಮ YouTube ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ