Yoga add Final 1
KLE1099 Add

ಎರಡು ಮಕ್ಕಳ ತಾಯಿಯನ್ನು ನಂಬಿಸಿ ಕರೆದೊಯ್ದ 21ರ ಪೂಜಾರಿ; ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿ

ರಾತ್ರಿಯಿಡಿ ಕಾಡಲ್ಲಿ ಒಂಟಿಯಾಗಿ ಕಳೆದ ಮಹಿಳೆ

GIT Add 3
Beereshwara add 12

ಪ್ರಗತಿವಾಹಿನಿ ಸುದ್ದಿ: ಮೈಸೂರು; ಕಳೆದ ಹತ್ತು ದಿನಗಳ ಹಿಂದೆ ಮಹಿಳೆಯೋರ್ವಳನ್ನು ನಂಬಿಸಿ ಕರೆದೊಯ್ದಿದ್ದ 21 ವರ್ಷದ ಯುವಕ ಕಾಡಿನಲ್ಲಿ ಮಹಿಳೆಯನ್ನು ಬಿಟ್ಟು ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೊಲ್ಲೂಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

35 ವರ್ಷದ ಎರಡು ಮಕ್ಕಳ ತಾಯಿ ಕಾಡಂಚಿನಲ್ಲಿ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದು, ಪೂಜಾರಿ ತನಗೆ ನಂಬಿಸಿ ಕರೆದುಕೊಂಡು ಬಂದಿದ್ದಾಗಿ ಕಣ್ಣೀರಿಟ್ಟಿದ್ದಾಳೆ. 21 ವರ್ಷದ ಅರ್ಚಕ ಸಂತೋಷ್ ನಾಪತ್ತೆಯಾಗಿರುವ ಯುವಕ.

ಮಹದೇಶ್ವರನ ದೇವಸ್ಥಾನಕ್ಕೆ ಹೋಗಿದ್ದಾಗ ಪರಿಚಯನಾದ ಅರ್ಚಕ ಸಂತೋಷ್, ಮಹಿಳೆಯೊಂದಿಗೆ ಸ್ನೇಹ ಸಲುಗೆ ಬೆಳೆಸಿಕೊಂಡಿದ್ದಾನೆ. ಬಾಳು ಕೊಡುವುದಾಗಿ ಹೇಳಿ ನಂಬಿಸಿ ಹತ್ತು ದಿನಗಳ ಹಿಂದೆ ಮಹಿಳೆಯನ್ನು ಕರೆದೊಯ್ದಿದ್ದಾನೆ. ಹತ್ತು ದಿನಗಳ ಕಾಲ ಮಹಿಳೆಯೊಂದಿಗೆ ಓಡಾಡಿದ ಸಂತೋಷ್ ನಿನ್ನೆ ಆತ್ಮಹತ್ಯೆ ನಾಟಕವಾಡಿ ಕಾಡಿನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.

ನಿನ್ನೆ ರಾತ್ರಿಯಿಡಿ ಕಾಡಿನಲ್ಲಿ ಕಳೆದ ಮಹಿಳೆ ಇಂದು ಮುಂಜಾನೆ ಕಾಡಂಚಿನಲ್ಲಿ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದಾಳೆ. ಮಹಿಳೆಯ ಕಥೆ ಕೇಳಿದ ಗ್ರಾಮಸ್ಥರು ಹುಲ್ಲಹಳ್ಳಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದು, ಪೂಜಾರಿ ಪತ್ತೆಗೆ ಶೋಧ ನಡೆಸಿದ್ದಾರೆ.
ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದ ಸಿಎಂ ಉದ್ಧವ್ ಠಾಕ್ರೆಗೆ ಮತ್ತೊಂದು ಸಂಕಷ್ಟ

Home add- Bottom