Beereshwara Add 10
KLE1099 Add

PSI ಪರೀಕ್ಷೆ ಅಕ್ರಮ: ಮೂವರು ಮಹಿಳೆಯರು ಸೇರಿ 6 ಜನರ ಬಂಧನ

PSI examination : arrest of 6 people, including three women

ಪ್ರಗತಿವಾಹಿನಿ ಸುದ್ದಿ, ಕಲಬುರಗಿ – ಪಿಎಸ್ಐ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ 6 ಜನರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ಮೂವರು ಮಹಿಳೆಯರು ಹಾಗೂ ಮೂವರು ವಿದ್ಯಾರ್ಥಿಗಳು.  ಮಹಿಳೆಯರು ಪರೀಕ್ಷೆ ಮೇಲ್ವಿಚಾರಕರಾಗಿ ಕೆಲಸ ನಿರ್ವಹಿಸಿದ್ದರು.

545 ಪಿಎಸ್ಐ ನೇಮಕಕ್ಕೆ ನಡೆದ ಪರೀಕ್ಷೆ ವೇಳೆ ಅಕ್ರಮ ಬಯಲಾಗಿತ್ತು. ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ.

ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಮೇಲ್ವಿಚಾರಕರಾದ ಸಾವಿತ್ರಿ, ಸುಮಾ ಮತ್ತು ಸಿದ್ದಮ್ಮ ಬಂಧಿತರು. ವಿದ್ಯಾರ್ಥಿಗಳಾದ ಆಳಂದದ ಚೇತನ್, ರಾಯಚೂರಿನ ಪ್ರವೀಣಕುಮಾರ ಮತ್ತು ಸುಲ್ತಾನಪುರದ ಅರುಣ ಬಂಧಿತರು.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪ್ರಕರಣದಲ್ಲಿ ಇನ್ನಷ್ಟು ಜನರು ಭಾಗಿಯಾಗಿರುವ ಶಂಕೆ ಇದ್ದು ತನಿಖೆ ಮುಂದುವರಿದಿದೆ.

ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ: ಬಿಜೆಪಿ ಮಾಡಿದ ಹನ್ನೆರಡು ತಪ್ಪುಗಳು

ಗುತ್ತಿಗೆದಾರ ಸಂತೋಷ್ ಪ್ರಕರಣದಲ್ಲಿ ಕೇಳಿಬಂತು ಹೊಸ ಹೆಸರು: ಯಾರೀತ ರಾಜೇಶ್ ?

You cannot copy content of this page