ಕಾಲೇಜು ವಿದ್ಯಾರ್ಥಿನಿಯರ ದುರಂತ ಸಾವು 

ರೈಲ್ವೆ ಹಳಿ ದಾಟುವ ವೇಳೆ ಕಾಲೇಜು ವಿದ್ಯಾರ್ಥಿನಿಯರಿಬ್ಬರು ದುರಂತ ಸಾವನ್ನಪ್ಪಿದ್ದಾರೆ.

ಪ್ರಗತಿವಾಹಿನಿ ಸುದ್ದಿ, ಖಾನಾಪುರ –  ರೈಲ್ವೆ ಹಳಿ ದಾಟುವ ವೇಳೆ ಕಾಲೇಜು ವಿದ್ಯಾರ್ಥಿನಿಯರಿಬ್ಬರು ದುರಂತ ಸಾವನ್ನಪ್ಪಿದ್ದಾರೆ.
ಖಾನಾಪುರ ತಾಲೂಕಿನ ಗಡಿಭಾಗದ ಕೊನೆಯ ಪುರ ಗ್ರಾಮದ ಕಾಲೇಜು ವಿದ್ಯಾರ್ಥಿನಿಯರು ಅಳ್ಣಾವರ ಸಮೀಪದ ತೇರಗಾಂವ ಸರಕಾರಿ ಕಾಲೇಜಿನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಮರಳುವಾಗ ಅವಘಡ ಸಂಭವಿಸಿದೆ.
ಕಲಾವತಿ ಮಂಜುನಾಥ ಬೋಬಾಟಿ ಗೆಳತಿಯೊಂದಿಗೆ ಹಳ್ಳದ ಸೇತುವೆ ಮೇಲೆ ರೇಲ್ವೆ ಗಾಡಿ ಬರುವುದನ್ನು ಗಮನಿಸದೆ ಹಳಿ ದಾಟುವಾಗ  ಸಂಜೆ ೫.೩೦ ಕ್ಕೆ ಬರುವ ಗೂಡ್ಸ್  ರೈಲು ಗಾಡಿ    ಹರಿದು ಕೈ, ಕಾಲು, ದೇಹ ಮೂರ್ನಾಲ್ಕು ತುಂಡಾಗಿ ತಕ್ಷಣ ಸಾವನ್ನಪ್ಪಿದ್ದಾಳೆ.
ಜತೆಗಿದ್ದ ಮತ್ತೊಬ್ಬ ವಿದ್ಯಾರ್ಥಿನಿ ನಿಖಿತಾ ಪಾಟೀಲ ಅವಳಿಗೆ ಗಂಭೀರ ಗಾಯಗಳಾಗಿದ್ದವು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅವಳೂ ಕೊನೆಯುಸಿರು ಎಳೆದಳು.
ರೇಲ್ವೆ ಪೋಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.