ನದಿಗೆ ಹಾರಿದ ಮಹಿಳೆ?

ಮೃತ ಮಹಿಳೆಯ  ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ

 ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಖಾನಾಪುರ ಪಟ್ಟಣ ಸಮೀಪದ ಸೋಮವಾರ ಬೆಳಗಿನ ಜಾವ ಮಲಪ್ರಭಾ ನದಿಯ ಸೇತುವೆ ಸನಿಹದಲ್ಲಿ ಅಪರಿಚಿತ ಮಹಿಳೆಯ ಮೃತ ದೇಹ ಪತ್ತೆಯಾಗಿದೆ.

ಮಹಿಳೆಯ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಆಕೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.  ಸುದ್ದಿ ತಿಳಿದ ತಕ್ಷಣ ಖಾನಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತ ದೇಹವನ್ನು ಹೊರಗೆ ತೆಗೆದು ಪರಿಶೀಲನೆ ಮಾಡುತ್ತಿದ್ದಾರೆ.

ಮೃತ ಮಹಿಳೆಯ  ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ. ಈ ಮಹಿಳೆ ಸುಮಾರು 42 ರಿಂದ 45 ವಯಸಿನವಳಿರಬಹುದು  ಎಂದು ಊಹಿಸಲಾಗಿದೆ. ಇವರ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ಖಾನಾಪುರ ಪೊಲೀಸ್ ಠಾಣೆ ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಫೋನ್ ನಂ. 08336-222333 ಹಾಗೂ 9480804086 ಕ್ಕೆ ಸಂಪರ್ಕಿಸುವಂತೆ ಕೋರಲಾಗಿದೆ.

ಈ ಸುದ್ದಿಗಳನ್ನೂ ಓದಿ –

ಲಕ್ಷ್ಮೀ ಕಾಲು ಮುರಿದುಕೊಂಡು ಬಿದ್ದಾಳ

ಹಿಂದೂ ಹುಡುಗಿ ಮುಸ್ಲಿಂ ಹುಡುಗನ ಜೊತೆ ಮಲಗಬೇಕಂತೆ