Yoga add Final 1
KLE1099 Add

ಪತ್ನಿ ಬಿಟ್ಟು ಪರಸ್ತ್ರೀಯರ ವ್ಯಾಮೋಹ; ಮೂವರು ಮಹಿಳೆಯರ ಬರ್ಬರ ಹತ್ಯೆ

ಸೈಕೋ ಕಿಲ್ಲರ್ ಬಂಧನ

GIT Add 3
Beereshwara add 12

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ನಾಲೆಯಲ್ಲಿ ರುಂಡವಿಲ್ಲದ ಮಹಿಳೆಯರ ಎರಡು ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸೈಕೋ ಕಿಲ್ಲರ್ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯದ ಬೇಬಿ ಗ್ರಾಮದ ಕೆರೆ ಹಾಗೂ ಅರಕೆರೆ ಕಿರುನಾಲೆಯಲ್ಲಿ ಇತ್ತೀಚೆಗೆ ರುಂಡವಿಲ್ಲದ ಸ್ಥಿತಿಯಲ್ಲಿ ಮಹಿಳೆಯರ ಮೃತದೇಹ ಪತ್ತೆಯಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಶ್ರೀರಂಗಪಟ್ಟಣ ಪೊಲೀಸರು ಬೆಂಗಳೂರು ಮೂಲದ 35 ವರ್ಷದ ಸಿದ್ದಲಿಂಗಪ್ಪ ಬಂಧಿಸಿದ್ದಾರೆ.

ಮದುವೆಯಾಗಿದ್ದರೂ ಸಿದ್ದಲಿಂಗಪ್ಪ ಪರಸ್ತ್ರೀಯರ ವ್ಯಾಮೋಹಕ್ಕೆ ಒಳಗಾಗಿ ಒಂದರ ಮೇಲೊಂದರಂತೆ ಮೂವರು ಮಹಿಳೆಯರ ಹತ್ಯೆ ಮಾಡಿದ್ದ. ಪತ್ನಿಯ ಸಂಬಂಧಿಯೊಬ್ಬಳ ಪ್ರೇತಿ-ಪ್ರೇಮದ ಬಲೆಗೆ ಬಿದ್ದಿದ್ದ. ಆಕೆಗೆ ವೇಶ್ಯಾವಾಟಿಕೆ ನಂಟಿತ್ತು. ಇದನ್ನು ಸಹಿಸದೇ ಪ್ರೇಯಸಿಯ ಲಿಂಕ್ ನಲ್ಲಿದ್ದ ಮಹಿಳೆಯರನ್ನೇ ಕೊಲೆಗಯ್ಯುತ್ತಾ ಬಂದಿದ್ದ.

ತನ್ನ ಪ್ರೇಯಸಿಗೆ ಹಣ, ಒಡವೆಗಳ ಆಸೆ ತೋರಿಸಿ ಚಾಮರಾಜನಗರ ಹಾಗೂ ಚಿತ್ರದುರ್ಗದ ಮೂಲದ ಇಬ್ಬರು ಮಹಿಳೆಯರನ್ನು ಮನೆಗೆ ಕರೆಸಿ, ಕೊಲೆ ಮಾಡಿದ್ದ. ಬಳಿಕ ಮಹಿಳೆಯರಿಬ್ಬರ ರುಂಡ-ಮುಂಡ ಬೇರ್ಪಡಿಸಿ ಮಂಡ್ಯದ ಬೇಬಿ ಗ್ರಾಮದ ಕೆರೆ ಹಾಗೂ ಅರಕೆರೆ ಸಮೀಪದ ನಾಲೆಗೆ ಮೃತದೇಹ ಎಸೆದು ಪರಾರಿಯಾಗಿದ್ದ.

ಪ್ರಕರಣ ಬೇಧಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಇಬ್ಬರು ಮಹಿಳೆಯರ ಹತ್ಯೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಮೂವರು ಮಹಿಳೆಯರ ಹತ್ಯೆ ಹಾಗೂ 5 ಹತ್ಯೆಗೆ ಸಂಚು ರೂಪಿಸಿದ್ದ ಬಗ್ಗೆ ಬಯಲಾಗಿದೆ. ಈ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಹೆತ್ತ ಮಗುವನ್ನೇ ಅಪಾರ್ಟ್ ಮೆಂಟ್ ನಿಂದ ಕೆಳಗೆ ಎಸೆದು ಹತ್ಯೆಗೈದ ತಾಯಿ

Home add- Bottom