Advertisement -Home Add

ಮಲಪ್ರಭಾ ನದಿ ಸೇತುವೆ ಕೆಳಗೆ ಅಪರಿಚಿತ ಶವ

ಸುಮಾರು 40 -45 ವರ್ಷ ವಯಸ್ಸಿನ ವ್ಯಕ್ತಿಯ ಶವ

ಪ್ರಗತಿವಾಹಿನಿ ಸುದ್ದಿ, ಖಾನಾಪುರ -ಖಾನಾಪುರ ಮಲಪ್ರಭಾ ನದಿಯಲ್ಲಿ ಇದ್ದ ಅನಾಮಧೇಯ ಶವವನ್ನು ಖಾನಾಪುರ ಪೋಲಿಸರು ಹೊರ ತೆಗೆದಿದ್ದಾರೆ.

ಸುಮಾರು 40 -45 ವರ್ಷ ವಯಸ್ಸಿನ ವ್ಯಕ್ತಿಯ ಶವ ಇದಾಗಿದೆ. ವ್ಯಕ್ತಿಯ ಹೆಸರು, ಊರು, ಸಾವಿಗೆ ಕಾರಣ ತಿಳಿದು ಬಂದಿಲ್ಲ.  ಬಿಳಿ ಬಣ್ಣ, ಮೀಸೆ-ದಾಡಿ ಬಿಟ್ಟಿರುವ ವ್ಯಕ್ತಿ ಕೇವಲ ನಿಕ್ಕರ ಧರಿಸಿದ್ದು,ಹೇಗೆ ಸಾವು ಸಂಭವಿಸಿದೆ ಎಂಬುದು ನಿಗೂಢವಾಗಿದೆ. ಪೋಲಿಸ್ ತನಿಖೆ ಮುಂದುವರಿದಿದೆ.

ಹೆಚ್ಚಿನ ಮಾಹಿತಿಗಾಗಿ ಫೋನ್ ನಂ. 08336-222333 ಹಾಗೂ 9480804086 ಕ್ಕೆ ಸಂಪರ್ಕಿಸುವಂತೆ ಕೋರಲಾಗಿದೆ.