*ಟಿಸಿ ದುರಸ್ತಿ ವೇಳೆ ಅವಘಡ: ಕರೆಂಟ್ ಶಾಕ್ ಹೊಡೆದು ಮೆಸ್ಕಾಂ ನೌಕರ ಸಾವು*

ಪ್ರಗತಿವಾಹಿನಿ ಸುದ್ದಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುರಂತಗಳ ಮೇಲೆ ದುರಂತ ಸಂಭವಿಸುತ್ತಿದೆ. ಮಳೆಯಿಂದಾಗಿ ಕೆಟ್ಟು ಹೋಗಿದ್ದ ಟಿಸಿ ದುರಸ್ತಿ ವೇಳೆ ಮೆಸ್ಕಾಂ ಸಿಬ್ಬಂದಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ವಿಜೇಶ್ ಜೈನ್ ಮೃತ ಮೆಸ್ಕಾಂ ನೌಕರ. ಬಂಟ್ವಾಳ ತಾಲೂಕಿನ ಓಡಿನ್ಮಾಳ ಗ್ರಾಮದಲ್ಲಿ ಟಿಸಿ ಕೆಟ್ಟು ಹೋಗಿತ್ತು. ದುರಸ್ತಿ ಮಾಡಲೆಂದು ತೆರಳಿದ್ದ ವೇಳೆ ಹೆಚ್ ಟಿ ಲೈನ್ ನಲ್ಲಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಬಂಟ್ವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.Home add … Continue reading *ಟಿಸಿ ದುರಸ್ತಿ ವೇಳೆ ಅವಘಡ: ಕರೆಂಟ್ ಶಾಕ್ ಹೊಡೆದು ಮೆಸ್ಕಾಂ ನೌಕರ ಸಾವು*