*ಪತ್ನಿ ಸಮೇತವಾಗಿ ಬಂದು ಮತದಾನ ಮಾಡಿದ ನಟ ದರ್ಶನ್*
ಪ್ರಗತಿವಾಹಿನಿ ಸುದ್ದಿ: ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಚುರುಕಿನಿಂದ ಸಾಗಿದೆ. ಮಧ್ಯಾಹ್ನ 3 ಗಂಟೆಯವರೆಗೆ ಶೇ.50.93ರಷ್ಟು ಮತದಾನವಾಗಿದೆ. ಕನ್ನಡ ಚಿತ್ರರಂಗದ ನಟ, ನಟಿಯರು ಮತಗಟ್ಟೆಗಳಿಗೆ ಬಂದು ಮತದಾನ ಮಾಡಿದ್ದಾರೆ. ಚಾಲೇಂಜಿಂಗ್ ಸ್ಟಾರ್ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮೀ ಜೊತೆ ಆರ್.ಆರ್.ನಗರದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾವಣೆ ಮಾಡಿದರು. ನಟಿ ರಚಿತಾ ರಾಮ್ ಆರ್.ಆರ್.ನಗರದಲ್ಲಿರುವ ಕೆವಿವಿ ಶಾಲೆ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಸಾಮಾನ್ಯ ಜನರಂತೆ ಮತದಾನ ಮಾಡಿದರು. *ಲೋಕಸಭಾ ಚುನಾವಣೆ: ಮತದಾನ ಮಾಡಿದ ಸಿನಿತಾರೆಯರು*
Copy and paste this URL into your WordPress site to embed
Copy and paste this code into your site to embed