*ರಾಜ್ಯದಲ್ಲಿ ಡೆಂಘೀ ಅಟ್ಟಹಾಸ; 11 ವರ್ಷದ ಬಾಲಕ ಬಲಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಮಳೆಯ ಅಬ್ಬರದ ನಡುವೆ ಡೆಂಘೀ ಮಹಾಮಾರಿ ಸೋಂಕು ಹೆಚ್ಚುತ್ತಿದ್ದು, ಬಾಲಕನೊಬ್ಬ ಡೆಂಘಿಗೆ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಅಂಜನಾಪುರದಲ್ಲಿ 11 ವರ್ಷದ ಗಗನ್ ಎಂಬ ಬಾಲಕ ಡೆಂಘೀ ಸೋಂಕಿನಿಂದ ಮೃತಪಟ್ಟಿದ್ದಾನೆ. ಗಗನ್ ಹಲವು ದಿನಗಳಿಂದ ಡೆಂಘಿ ಜ್ವರದಿಂದ ಬಳಲುತ್ತಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಸುಧಾರಣೆ ಕಂಡು ಮನೆಗೆ ವಾಪಾಸ್ ಆಗಿದ್ದ ಬಾಲಕ ತಡರಾತ್ರಿ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾನೆ. ಡೆಂಘೀ ಜ್ವರದಿಂದ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.Home add -Advt *ಬೆಳಗಾವಿ: 7 … Continue reading *ರಾಜ್ಯದಲ್ಲಿ ಡೆಂಘೀ ಅಟ್ಟಹಾಸ; 11 ವರ್ಷದ ಬಾಲಕ ಬಲಿ*