*ಹೃದಯಾಘಾತ*: *LLB ವಿದ್ಯಾರ್ಥಿ ಸಾವು*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಹೃದಯಾಘಾತ ಸಂಭವಿಸುತ್ತಿದೆ. ಹೃದಯಾಘಾತದಿಂದ ಎಲ್‌ಎಲ್‌ಬಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಮರ್ಥ್ ದೇಶಪಾಂಡೆ (22) ಮೃತ ವಿದ್ಯಾರ್ಥಿ. ಧಾಅರವಾಡದಲ್ಲಿ ಈ ಘಟನೆ ನಡೆದಿದೆ. ಧಾರವಾಡದ ಹಿರಿಯ ವಕೀಲರ ಮಗನಾಗಿದ್ದ ಸಮರ್ಥ್ ಎಲ್‌ಎಲ್‌ಬಿ ಕೊನೆಯ ವರ್ಷ ಓದುತ್ತಿದ್ದ. ಸಮರ್ಥ ತಂದೆ ಅನೂಪ್ ದೇಶಪಾಂಡೆ ಸಹಕಾರಿ ಸಂಘಗಳ ಕೇಸ್ ನಡೆಸುತಿದ್ದರು. ಮೃತ ಸಮರ್ಥ್ ಅಂತ್ಯಕ್ರಿಯೆ ಧಾರವಾಡ ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ಮಧ್ಯಾಹ್ನ ನಡೆಯಲಿದೆ ಎಂದು … Continue reading *ಹೃದಯಾಘಾತ*: *LLB ವಿದ್ಯಾರ್ಥಿ ಸಾವು*