*ಪತ್ನಿ ಕಪ್ಪಗಿದ್ದಾಳೆಂದು ಪತಿಯಿಂದ ಅವಮಾನ: ಮನನೊಂದು ನವವಿವಾಹಿತೆ ಆತ್ಮಹತ್ಯೆ*
ಪ್ರಗತಿವಾಹಿನಿ ಸುದ್ದಿ: ಪತ್ನಿ ಕಪ್ಪಗಿದ್ದಾಳೆ, ವರದಕ್ಷಿಣೆ ತರಬೇಕು ಎಂದು ಪತಿಮಹಾಶಯ ಹಾಗೂ ಮನೆಯವರು ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ನಡೆದಿದೆ. ಮದುವೆಯಾದ 7 ತಿಂಗಳಲ್ಲೇ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 22 ವರ್ಷದ ಬಿಂದುಶ್ರೀ ಆತ್ಮಹತ್ಯೆಗೆ ಶರಣಾದವಳು. 7 ತಿಂಗಳ ಹಿಂದಷ್ಟೇ ಬಿಂದುಶ್ರೀಯನ್ನು ರಾಘವೇಂದ್ರ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಪತ್ನಿ ಕಪ್ಪಗಿದ್ದಾಳೆ ಎಂದು ಸದಾ ಅವಮಾನ ಮಾಡುತ್ತ, ಹಂಗಿಸುತ್ತಿದ್ದ ಪತಿ ಮಹಾಶಯ, ಬರಬರುತ್ತಾ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ. ಸಾಲದ್ದಕ್ಕೆ ಆತನ … Continue reading *ಪತ್ನಿ ಕಪ್ಪಗಿದ್ದಾಳೆಂದು ಪತಿಯಿಂದ ಅವಮಾನ: ಮನನೊಂದು ನವವಿವಾಹಿತೆ ಆತ್ಮಹತ್ಯೆ*
Copy and paste this URL into your WordPress site to embed
Copy and paste this code into your site to embed