*ನಕಲಿ ಔಷಧಿಗಳ ಜಾಲ*: *5 ಕಡೆ ಇಡಿ ದಾಳಿ*: *9 ಲಕ್ಷ, ಡಿಜಿಟಲ್ ದಾಖಲೆಗಳು ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ನಕಲಿ ಔಷಧಿಗಳ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಇಂದು ಐದು ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಿವೆ. ಪರಿಶೀಲನೆಯ ಸಂದರ್ಭದಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ವೀರೇಶ್ ಕುಮಾರ್‌ ಎಂಬಾತನ ಬ್ಯಾಂಕ್ ಖಾತೆಗಳಲ್ಲಿದ್ದ ಸುಮಾರು 9 ಲಕ್ಷ ರೂಪಾಯಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರ ಜೊತೆಗೆ ಕೃತ್ಯಕ್ಕೆ ಬಳಸಲಾಗುತ್ತಿದ್ದ ಡಿಜಿಟಲ್ ಉಪಕರಣಗಳು, ಪ್ರಮುಖ ದಾಖಲೆಗಳು ಹಾಗೂ ಹಲವು ವ್ಯಕ್ತಿಗಳಿಗೆ ಸಂಬಂಧಿಸಿದ ಅಪರಾಧ ಸಾಕ್ಷ್ಯಗಳನ್ನು ವಶಕ್ಕೆ ಪಡೆಯಲಾಗಿದೆ … Continue reading *ನಕಲಿ ಔಷಧಿಗಳ ಜಾಲ*: *5 ಕಡೆ ಇಡಿ ದಾಳಿ*: *9 ಲಕ್ಷ, ಡಿಜಿಟಲ್ ದಾಖಲೆಗಳು ವಶಕ್ಕೆ*