*ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ: ಮೂವರು ಮಹಿಳಾ ಕಾರ್ಮಿಕರ ಸಾವು*

ಪ್ರಗತಿವಾಹಿನಿ ಸುದ್ದಿ: ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಮಹಿಳಾ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕಂಬನಲ್ಲೂರಿನಲ್ಲಿ ನಡೆದಿದೆ.  ಮೃತರೆಲ್ಲರೂ ಹತ್ತಿರದ ಹಳ್ಳಿಯ ನಿವಾಸಿಗಳು. ಸ್ಫೋಟ ಸಂಭವಿಸಿದಾಗ ಅವರು ಚಿನ್ನದುರೈ ಒಡೆತನದ ಪರವಾನಗಿ ಪಡೆದ ಸಂಗ್ರಹಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೀಕರ ಸ್ಫೋಟದ ತೀವ್ರತೆಗೆ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದರು. ಸ್ಫೋಟದ ಕಾರಣವನ್ನು ಪ್ರಸ್ತುತ ತನಿಖೆ ಮಾಡಲಾಗುತ್ತಿದೆ. ಪಟಾಕಿಗಳ ಸ್ಫೋಟದ ನಂತರ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಮತ್ತು … Continue reading *ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ: ಮೂವರು ಮಹಿಳಾ ಕಾರ್ಮಿಕರ ಸಾವು*