*ನಕಲಿ ವೈದ್ಯನ ಇಂಜಕ್ಷನ್ ಗೆ ವ್ಯಕ್ತಿ ಸಾವು*

ಪ್ರಗತಿವಾಹಿನಿ ಸುದ್ದಿ: ನಕಲಿ ವೈದ್ಯನ ಇಂಜಕ್ಷನ್ ಗೆ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ನಡೆದಿದೆ. ಕೊತ್ತನೂರಿನ ಕೋಟೆ ಚಿತ್ತಯ್ಯ (58) ಮೃತ ದುರ್ದೈವಿ. ಅನಾರೋಗ್ಯ ಹಿನ್ನೆಲೆಯಲ್ಲಿ ಕಿಲಾರ್ಲಹಳ್ಳಿ ಗ್ರಾಮದಲ್ಲಿ ಕ್ಲೀನಿಕ್ ಗೆ ಹೋಗಿದ್ದ ಚಿತ್ತಯ್ಯಗೆ ಇಂಜಕ್ಷನ್ ನೀಡಲಾಗಿತ್ತು. ನಕಲಿ ವೈದ್ಯ ಮಾರುತಿ ಎಂಬಾತ ಚಿತ್ತಯ್ಯಗೆ ಇಂಜಕ್ಷನ್ ನೀಡಿದ್ದು, ಇಂಜಕ್ಷನ್ ಪಡೆದ ಬಳಿಕ ಇದೀಗ ಚಿತ್ತಯ್ಯ ಸಾವನ್ನಪ್ಪಿದ್ದಾರೆ. ಪಾವಗಡ ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಿದ್ದು, ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.Home add -Advt … Continue reading *ನಕಲಿ ವೈದ್ಯನ ಇಂಜಕ್ಷನ್ ಗೆ ವ್ಯಕ್ತಿ ಸಾವು*