*ಹಳಿ ತಪ್ಪಿದ ರೈಲು; ಈ ರೈಲುಗಳು ರದ್ದು, ಕೆಲ ರೈಲುಗಳ ಸಂಚಾರ ಬದಲಾವಣೆ*

ಪ್ರಗತಿವಾಹಿನಿ ಸುದ್ದಿ; ವಿಜಯನಗರ: ಗೂಡ್ಸ್ ರೈಲಿನ ಕೆಲ ಬೋಗಿಗಳು ಹಳಿತಪ್ಪಿದ ಘಟನೆ ವಿಜಯನಗರ ಜಿಲ್ಲೆಯ ವ್ಯಾಸನಕೇರಿ ರೈಲು ನಿಲ್ದಾಣದ ಬಳಿ ನಡೆದಿದೆ. ರೈಲಿನ ಬೋಗಿಗಳು ಹಳಿ ತಪ್ಪಿದ ಹಿನ್ನೆಲೆಯಲ್ಲಿ ಕೆಲ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಗೂಡ್ಸ್ ರೈಲು ಹಳಿ ತಪ್ಪಿದ ಕಾರಣ ರೈಲು ತೆರವುಗೊಳಿಸುವವರೆಗೆ ಈ ಮಾರ್ಗದಲ್ಲಿ ಸಂಚರಿಸುವ ಹೊಸಪೇಟೆ-ಹರಿಹರ ಪ್ಯಾಸೇಂಜರ್ ರೈಲು, ಹರಿಹರ-ಬಳ್ಳಾರಿ ಡೆಮೊ ಸ್ಪೆಷಲ್ ರೈಲು, ಬಳ್ಳಾರಿ-ಹೊಸಪೇಟೆ ಡೆಮೊ ಸ್ಪೆಷಲ್ ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ಇನ್ನು ಯಶವಂತಪುರ-ವಿಜಯಪುರ ಎಕ್ಸ್ ಪ್ರೆಸ್ ರೈಲು, ಹೊಸಪೇಟೆ-ಕೊಟ್ಟೂರು ರೈಲು … Continue reading *ಹಳಿ ತಪ್ಪಿದ ರೈಲು; ಈ ರೈಲುಗಳು ರದ್ದು, ಕೆಲ ರೈಲುಗಳ ಸಂಚಾರ ಬದಲಾವಣೆ*