*ಗೂಡ್ಸ್ ವಾಹನದಲ್ಲಿ ಕದ್ದುಮುಚ್ಚಿ ಸಾಗಿಸುತ್ತಿದ್ದ 400 ಲೀಟರ್ ಗೋವಾ ಮದ್ಯ ವಶ*

ಪ್ರಗತಿವಾಹಿನಿ ಸುದ್ದಿ: ಖಾನಾಪುರ: ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಗೂಡ್ಸ್ ವಾಹನದಲ್ಲಿ ಕದ್ದುಮುಚ್ಚಿ ಸಾಗಿಸುತ್ತಿದ್ದ 400 ಲೀಟರ್ ಗೋವಾ ಮದ್ಯವನ್ನು ವಾಹನ ಸಮೇತ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ ಘಟನೆ ಗುರುವಾರ ತಾಲ್ಲೂಕಿನ ಕಣಕುಂಬಿ ಬಳಿ ಕರ್ನಾಟಕ ಗೋವಾ ಗಡಿಯಲ್ಲಿ ವರದಿಯಾಗಿದೆ. ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಕಣಕುಂಬಿ ತನಿಖಾ ಠಾಣೆಯ ಹತ್ತಿರ ಗೋವಾದಿಂದ ಬೆಳಗಾವಿಗೆ ಬರುತ್ತಿದ್ದ ಭಾರತ ಬೆಂಜ್ ಆರು ಚಕ್ರದ … Continue reading *ಗೂಡ್ಸ್ ವಾಹನದಲ್ಲಿ ಕದ್ದುಮುಚ್ಚಿ ಸಾಗಿಸುತ್ತಿದ್ದ 400 ಲೀಟರ್ ಗೋವಾ ಮದ್ಯ ವಶ*