*ಅತಿಥಿ ಉಪನ್ಯಾಸಕಿಯ ದುಡುಕಿನ ನಿರ್ಧಾರ; ಆತ್ಮಹತ್ಯೆಗೆ ಶರಣು*

ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯಲ್ಲಿ ನಡೆದಿದೆ.Home add -Advt 34 ವರ್ಷದ ದೀಪಾ ಮೃತರು. ಚನ್ನರಾಯಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದರು. ಸೋಮಶೇಖರ್ ಹಾಗೂ ಭಾಗ್ಯಾ ದಂಪತಿಯ ಪುತ್ರಿ ದೀಪಾ ಮದುವೆಯಾಗಿರಲಿಲ್ಲ. ಇಂದು ಇದ್ದಕ್ಕಿದ್ದಂತೆ ದೀಪಾ ಮನೆಯಲ್ಲಿಯೇ ನೇಣುಗೆ ಕೊರಳೊಡ್ಡಿದ್ದಾರೆ. ದೀಪಾ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. *ಫಲಿತಾಂಶಕ್ಕೆ ಭಯಪಟ್ಟು ವಿದ್ಯಾರ್ಥಿ ನಾಪತ್ತೆ*