*ಸ್ನೇಹಿತರೊಂದಿಗೆ ಈಜಲು ಹೋಗಿದ್ದಾಗ ದುರಂತ: ಇಬ್ಬರು ಬಾಲಕರು ನೀರುಪಾಲು*

ಪ್ರಗತಿವಾಹಿನಿ ಸುದ್ದಿ: ಗುಮ್ಮಲ ಡ್ಯಾಂ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ವೆಯಲ್ಲಿ ನಡೆದಿದೆ. ಶ್ರೀಶ (13) ಜಯಂತ್ (19) ಮೃತ ದುರ್ದೈವಿಗಳು. ರಜೆ ಹಿನ್ನೆಲೆಯಲ್ಲಿ ಇಬ್ಬರು ಬಾಲಕರು ಗೆಳೆಯರ ಜೊತೆ ಈಜಲು ಡ್ಯಾಂ ಗೆ ಹೋಗಿದ್ದರು. ಈ ವೇಳೆ ಇಬ್ಬರು ಬಾಲಕರು ನೀರು ಪಾಲಾಗಿದ್ದಾರೆ. ಶಂಕರನಾರಾಯನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. *ಶಿರಸಿ, ಕುಮಟಾ ಸೇರಿದಂತೆ ಉತ್ತರ ಕನ್ನಡದ ಹಲವೆಡೆ ಭೂಕಂಪನ*