*ಕುಡಿದ ಮತ್ತಿನಲ್ಲಿ ವಿಡಿಯೋ ಮಾಡಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಯುವಕ*

ಪ್ರಗತಿವಾಹಿನಿ ಸುದ್ದಿ: ಕಂಠಪೂರ್ತಿ ಕುಡಿದು ಅಮಲೇರಿಸಿಕೊಂಡಿದ್ದ ಯುವಕನೊಬ್ಬ ವಿಡಿಯೋ ಮಾಡಿ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಕಲವತ್ತು ಬಳಿ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ನದಿ ತೀರಕ್ಕೆ ಬಂದ ಯುವಕ ನಿಲ್ಲಲೂ ಆಗದೇ ತೂರಾಡಿದ್ದಾನೆ. ತೂರಾಡುತ್ತಲೇ ನದಿಗೆ ಹಾರಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಕೆಲವರು ಆತನನ್ನು ಮೇಲಕೆತ್ತಲು ಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಯುವಕ ನೀರಿನಲ್ಲಿ ಮುಳುಗಿ ಸಾವ್ನನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.Home add -Advt *ವಿದ್ಯಾರ್ಥಿಗಳ ಮೇಲಿನ ಎಲ್ಲಾ ಎಫ್ಐಆರ್ … Continue reading *ಕುಡಿದ ಮತ್ತಿನಲ್ಲಿ ವಿಡಿಯೋ ಮಾಡಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಯುವಕ*