*ಬೆಳಗಾವಿಯಲ್ಲಿ ಮತ್ತೊಂದು ಘಟನೆ: ರಜೆ ಮೇಲೆ ಬಂದಿದ್ದ ಯೋಧ ಹೃದಯಾಘಾತದಿಂದ ಸಾವು*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಹೃದಯಾಘಾತದಿಂದ ಸಾವಿನ ಸರಣಿ ಮುಂದುವರೆದಿದೆ. ರಸ್ತೆ ಬಳಿ ನಡೆದು ಹೋಗುತ್ತಿದ್ದ ಯೋಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಇಬ್ರಾಹಿಂ ದೇವಲಾಪುರ (37) ಮೃತ ಯೋಧ. ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಅನಗೋಳ ಬಜಾರ್ ನಲ್ಲಿ ಇದ್ದಕ್ಕಿದಂತೆ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಹೃದಯಾಘಾತದಿಂದ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಣ್ಣ ವಯಸ್ಸಿನವರೂ ಸಾವನ್ನಪ್ಪುತ್ತಿರುವುದು ಆತಂಕಕ್ಕೆ ಕಾರಣವಗಿದೆ. *ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಮತ್ತೋರ್ವ ವೈದ್ಯ* … Continue reading *ಬೆಳಗಾವಿಯಲ್ಲಿ ಮತ್ತೊಂದು ಘಟನೆ: ರಜೆ ಮೇಲೆ ಬಂದಿದ್ದ ಯೋಧ ಹೃದಯಾಘಾತದಿಂದ ಸಾವು*