*ನ್ಯೂ ಇಯರ್ ಪಾರ್ಟಿಗೆ ಗೋವಾಗೆ ತೆರಳಿದ್ದ ಯುವಕ ಹೃದಯಾಘಾತದಿಂದ ಸಾವು*

ಪ್ರಗತಿವಾಹಿನಿ ಸುದ್ದಿ: ಹೊಸ ವರ್ಷಾಚರಣೆ ಸಂಭ್ರಮಿಸಲು ಸಹೋದರರು ಹಾಗೂ ಸಂಬಂಧಿಕರ ಜೊತೆ ಗೋವಾಗೆ ತೆರಳಿದ್ದ ಯುವಕನೊಬ್ಬ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ. ರಕ್ಷಿತ್ (26) ಮೃತ ಯುವಕ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹೊಸಳ್ಳಿ ಗ್ರಾಮದ ಯುವಕ. ಸಹೋದರರಾದ ಚಿದಂಬರಂ, ಪ್ರವೀಣ್ ಹಾಗೂ ಸಂಬಂಧಿಕರ ಜೊತೆ ನ್ಯೂ ಇಯರ್ ಪಾರ್ಟಿಗೆ ಗೋವಾಗೆ ಹೋಗಿದ್ದ. ಭರ್ಜರಿ ಪಾರ್ಟಿಯನ್ನೂ ಮಾಡಿದ್ದರು. ಜನವರಿ 1ರಂದು ಬೆಳಿಗ್ಗೆ ಗೋವಾದಲ್ಲಿ ಸುತ್ತಾಡುತ್ತಿದ್ದ ವೇಳೆ ರಕ್ಷಿತ್ ಗೆ ಹೃದಯಾಘಾತವಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಿಲ್ಲ. … Continue reading *ನ್ಯೂ ಇಯರ್ ಪಾರ್ಟಿಗೆ ಗೋವಾಗೆ ತೆರಳಿದ್ದ ಯುವಕ ಹೃದಯಾಘಾತದಿಂದ ಸಾವು*