*ಮೆಡಿಕಲ್ ಸ್ಟೋರ್ ಗೆ ಬಂದ ವ್ಯಕ್ತಿ ಹೃದಯಾಘಾತದಿಂದ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ಔಷಧಿ ಖರೀದಿಸಲು ಮೆಡಿಕಲ್ ಸ್ಟೋರ್ ಗೆ ಬಂದಿದ್ದ ವ್ಯಕ್ತಿ ಏಕಾಏಕಿ ಕುಸಿದು ಬಿದ್ದು ಹೃದಯಾಘತದಿಂದ ಸಾವನ್ನಪ್ಪಿರುವ ಘಟನೆ ಮೈಸೂರಿನ ಉದಯಗಿರಿಯಲ್ಲಿ ನಡೆದಿದೆ. ಜಗದೀಶ್ (38) ಮೃತ ವ್ಯಕ್ತಿ. ಜಗದೀಶ್ ಗೆ ಎದೆನೋವು ಕಾಣಿಸಿಕೊಂಡ ಕಾರಣ ಮೆಡಿಕಲ್ ಸ್ಟೋರ್ ಗೆ ಮಾತ್ರೆ ಖರೀದಿಸಲು ಬಂದಿದ್ದರು. ಈ ಹೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಜಗದೀಶ್ ಕ್ಯಾತರಾಮನಹಳ್ಳಿಯಲ್ಲಿ ಚಿಕನ್ ಅಂಗಡಿ ನಡೆಸುತ್ತಿದ್ದರು. ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.Home add -Advt … Continue reading *ಮೆಡಿಕಲ್ ಸ್ಟೋರ್ ಗೆ ಬಂದ ವ್ಯಕ್ತಿ ಹೃದಯಾಘಾತದಿಂದ ದುರ್ಮರಣ*