*ಕಡಲತೀರದಲ್ಲಿ ಭೀಕರ ದುರಂತ*: *ಜಾರ್ಖಂಡ್​ನ ಯುವತಿ ಸೇರಿ ಬೆಂಗಳೂರಿನ ಮೂವರು ಐಟಿ ಉದ್ಯೋಗಿಗಳು ಸಾವು*

ಪ್ರಗತಿವಾಹಿನಿ ಸುದ್ದಿ: ವಾರಾಂತ್ಯದ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಬಂದಿದ್ದ ಬೆಂಗಳೂರಿನ ಐಟಿ ಉದ್ಯೋಗಿಗಳ ತಂಡಕ್ಕೆ ಭೀಕರ ದುರಂತ ಎದುರಾಗಿದೆ. ದುಬ್ಬಣಶಶಿ ಕಡಲತೀರದಲ್ಲಿ ಆಟವಾಡಲು ಸಮುದ್ರಕ್ಕಿಳಿದಿದ್ದ ಐವರು ಭಾರಿ ಅಲೆಗೆ ಸಿಲುಕಿ ಕೊಚ್ಚಿಹೋಗಿದ್ದಾರೆ. ಈ ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಂಗಳೂರಿನ ಬೆಳ್ಳಂದೂರಿನ ಅಲೋರಿಯಾ ಇಕೋಸ್ಪೇಸ್ ಕಂಪನಿಯ 16 ಉದ್ಯೋಗಿಗಳ ತಂಡ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಆಗಮಿಸಿತ್ತು. ತಂಡವು ದುಬ್ಬಣಶಶಿ ಬೀಚ್‌ನಲ್ಲಿರುವ ಕೋಜೆ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿತ್ತು. ಈ ವೇಳೆ ಕೆಲವರು ಸಮುದ್ರದಲ್ಲಿ ಆಟವಾಡಲು ನೀರಿಗಿಳಿದಿದ್ದರು. ಏಕಾಏಕಿ … Continue reading *ಕಡಲತೀರದಲ್ಲಿ ಭೀಕರ ದುರಂತ*: *ಜಾರ್ಖಂಡ್​ನ ಯುವತಿ ಸೇರಿ ಬೆಂಗಳೂರಿನ ಮೂವರು ಐಟಿ ಉದ್ಯೋಗಿಗಳು ಸಾವು*