*ಸಂಕೇಶ್ವರ ನಿಲಗಾರ ಗಣಪತಿ ದರ್ಶನಕ್ಕೆ ಭಾರೀ ನೂಕುನುಗ್ಗಲು: ಸ್ವಲ್ಪದರಲ್ಲೇ ತಪ್ಪಿದ ಅನಾಹುತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಪ್ರಸಿದ್ಧ ನಿಲಗಾರ ಗಣಪತಿ ದರ್ಶನಕ್ಕೆ ಭಾನುವಾರ ಸಾವಿರಾರು ಭಕ್ತರು ಆಗಮಿಸಿದ್ದರು. ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿ ದೇವಸ್ಥಾನದ ಸಮೀಪ ದರ್ಶನಕ್ಕಾಗಿ ನಿರ್ಮಿಸಿದ್ದ ಸರತಿ ಸಾಲಿನಲ್ಲಿ ಏಕಾಏಕಿ ನೂಕುನುಗ್ಗಲು ಉಂಟಾಗಿ, ಕೆಲಕಾಲ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು. ನೂಕುನುಗ್ಗಲಿನಿಂದ ಮಹಿಳೆಯರು ಸೇರಿದಂತೆ ಭಕ್ತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಭಾರೀ ಸಂಖ್ಯೆಯಲ್ಲಿ ಭಕ್ತರು ಒಂದೇ ವೇಳೆ ಆಗಮಿಸಿದ್ದರಿಂದ ನೂಕಾಟ ತಳ್ಳಾಟ ನಡೆದು ಗೊಂದಲದ ವಾತಾವರಣ ನಿರ್ಮಾಣವಾಯಿತು. ಅದೃಷ್ಟವಶಾತ್ … Continue reading *ಸಂಕೇಶ್ವರ ನಿಲಗಾರ ಗಣಪತಿ ದರ್ಶನಕ್ಕೆ ಭಾರೀ ನೂಕುನುಗ್ಗಲು: ಸ್ವಲ್ಪದರಲ್ಲೇ ತಪ್ಪಿದ ಅನಾಹುತ*