*ಕೈಕೊಟ್ಟ ಮಳೆ, ಸಾಲಬಾಧೆ… ಬೆಳಗಾವಿಯಲ್ಲಿ ರೈತ ಮಹಿಳೆ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಾಲಬಾಧೆ ತಾಳಲಾರದೇ ರೈತ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಲಗಮವ್ವಾ ಶಿವಾನಂದ ಬಾಗಿ ಮೃತ ಮಹಿಳೆ. ಒಂದೆಡೆ ಸಾಲಬಾಧೆ ಮತ್ತೊಂದೆಡೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬಿತ್ತಿದ ಬೆಳೆಗಳು ಜಮೀನಿನಲ್ಲಿ ಒಣಗುತ್ತಿದೆ. ಇದರಿಂದ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆಗೆ ನಾಲ್ವರು ಮಕ್ಕಳಿದ್ದು, ಮಕ್ಕಳು ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. *ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್; ಯುವಕ ಅರೆಸ್ಟ್* Home add -Advt