*ಪೊಲೀಸ್ ಠಾಣೆಯಲ್ಲೇ ಪತ್ನಿಯನ್ನು ಕೊಲೆಗೈಯ್ಯಲು ಯತ್ನಿಸಿದ ಪತಿ*

ಪ್ರಗತಿವಾಹಿನಿ ಸುದ್ದಿ; ಹಾಸನ: ಪತಿ ಮಹಾಶಯನೊಬ್ಬ ಪೊಲೀಸ್ ಠಾಣೆಯಲ್ಲಿಯೇ ಪತ್ನಿಯನ್ನು ಕತ್ತು ಕುಯ್ದು ಕೊಲೆ ಮಾಡಲು ಯತ್ನಿಸಿರುವ ಘಟನೆ ಹಾಸನ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಶಿಲ್ಪ ಗಾಯಗೊಂಡಿರುವ ಮಹಿಳೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹರೀಶ್ ಹಾಗೂ ಶಿಲ್ಪಾ 6 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಇಬ್ಬರ ನಡುವೆ ಗಲಾಟೆ, ಜಗಳ ವಿಕೋಪಕ್ಕೆ ತಿರುಗಿ ಬೇಸತ್ತ ಶಿಲ್ಪ ಪತಿ ವಿರುದ್ಧ ಕಿರುಕುಳ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಹರೀಶ್ ನನ್ನು ಠಾಣೆಗೆ … Continue reading *ಪೊಲೀಸ್ ಠಾಣೆಯಲ್ಲೇ ಪತ್ನಿಯನ್ನು ಕೊಲೆಗೈಯ್ಯಲು ಯತ್ನಿಸಿದ ಪತಿ*