*ಗುರಿ ನಿಶ್ಚಯಿಸಿ ಪರಿಶ್ರಮಿಸಿದರೆ ಯಶಸ್ಸು ಖಚಿತ: ಅನಂತ ಲಾಡ್*

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿದ್ಯಾರ್ಥಿಗಳು ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೇ ತಮ್ಮ ಗುರಿಯನ್ನು ನಿಶ್ಚಯಿಸಿ,  ಅದನ್ನು ಸಾಧಿಸಲು ಯೋಜಿತವಾಗಿ ಶ್ರಮಿಸಬೇಕು. ಗುರಿ ತಲುಪಲು ಸಹಾಯವಾಗುವಂತೆ ಮಾರ್ಗದರ್ಶಕರಾಗಿರುವ ಶಿಕ್ಷಕರು ಹಾಗೂ ಪಾಲಕರ ನೆರವು ಪಡೆಯಬೇಕು ಎಂದು ನಿವೃತ್ತ ಶಿಕ್ಷಕ ಅನಂತ ಲಾಡ್ ತಿಳಿಸಿದರು.  ಆನಮೋಲ್ ವಿವಿಧೋದ್ಧೇಶ ಸಹಕಾರ ಸಂಘದಲ್ಲಿ ಭಾರತ ಹಾಗೂ ಭಾರತೀಯ ಸಂವಿಧಾನ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು  ಗೌರವಿಸುವ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  “ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು.  ಕಳೆದುಹೋದ ಹಣವನ್ನು  ಮತ್ತೆ  ಗಳಿಸಬಹುದು,  ಆದರೆ ಕಳೆದುಹೋದ ಸಮಯ ಮರಳಿ ಸಿಗದು.  ಆದ್ದರಿಂದ ಸಮಯವನ್ನು ಸರಿಯಾಗಿ  ಬಳಸಬೇಕು. ಪರಿಶ್ರಮವಿಲ್ಲದೆ ಯಾರೂ ದೊಡ್ಡವರಾಗುವುದಿಲ್ಲ” ಎಂದು ಅವರು ಹೇಳಿದರು.  ಜೀವನಕ್ಕೆ ಸರಿಯಾದ ದಿಕ್ಕು ನೀಡುವಂತಹ  ಮಹಾನ್ ವ್ಯಕ್ತಿಗಳ ಜೀವನಚರಿತ್ರೆಗಳನ್ನು ಓದುವ ಅಗತ್ಯವಿದೆ ಎಂದರು. ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಬಸವರಾಜ ಕುಡಚಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಮಕ್ಕಳನ್ನು ಬಾಲ್ಯದಿಂದಲೇ  ಸಂಸ್ಕಾರಯುಕ್ತರನ್ನಾಗಿ  ಬೆಳೆಸುವ  ಅಗತ್ಯವಿದೆ ಎಂದರು. ಇಂದಿನ ಜಗತ್ತು ವೇಗವಾಗಿ ಬದಲಾಗುತ್ತಿದೆ.  ಭಾರತವು ಮುಂದಿನ ದಿನಗಳಲ್ಲಿ  ಜಗತ್ತಿನ ನಾಯಕ ರಾಷ್ಟ್ರವಾಗಲಿದೆ ಎಂದು  ಅವರು ಹೇಳಿದರು. ಪ್ರಾಸ್ತಾವಿಕ ಭಾಷಣದಲ್ಲಿ ಮಹಿಳಾ ಸಂಸ್ಥೆಯ ಅಧ್ಯಕ್ಷರಾದ ದೇವೇಂದ್ರ ಬನ್ಸಲ್ ರವರು ಸಂಸ್ಥೆಯ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣೋಪಯೋಗಿ ಯೋಜನೆಗಳ  ಮೂಲಕ ಸಹಾಯ ಮಾಡುತ್ತಿದೆ. ಇದುವರೆಗೂ ಅನೇಕ ಶಾಲೆಗಳಿಗೆ ನೆರವು ನೀಡಿದೆ ಎಂದು ಹೇಳಿದರು.Home … Continue reading *ಗುರಿ ನಿಶ್ಚಯಿಸಿ ಪರಿಶ್ರಮಿಸಿದರೆ ಯಶಸ್ಸು ಖಚಿತ: ಅನಂತ ಲಾಡ್*