*ಬೆಳೆ ಉಳಿಸಲು ಹಾಕಿದ ವಿದ್ಯುತ್ ಬೇಲಿಗೆ ಕಾಡಾನೆ ಸಾವು*: *ತಂದೆ, ಮಗನ ಬಂಧನ*

ಪ್ರಗತಿವಾಹಿನಿ ಸುದ್ದಿ: ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಹಾಕಿದ ಬೇಲಿಯೇ ಕಾಡಾನೆಯೊಂದರ ಜೀವಕ್ಕೆ ಮುಳುವಾಗಿದೆ. ಭತ್ತದ ಗದ್ದೆಯ ಸುತ್ತ ಅಕ್ರಮವಾಗಿ ವಿದ್ಯುತ್ ಹರಿಸಿದ್ದರಿಂದ ಗಂಡಾನೆಯೊಂದು ಸ್ಥಳದಲ್ಲೇ ಮೃತಪಟ್ಟಿದೆ. ಘಟನೆ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆನೆಯ ಸಾವಿಗೆ ಕಾರಣರಾದ ಆರೋಪದ ಮೇಲೆ ತಂದೆ ಮತ್ತು ಮಗನನ್ನು ಬಂಧಿಸಲಾಗಿದೆ. ಶಿರಸಿ ತಾಲೂಕಿನ ಮಳಲಗಾಂವ್ ಗ್ರಾಮದ ಮಳಲಗಾಂವ್‌ನ ಶಿವಪ್ಪ ನಾಯ್ಕ (76) ಮತ್ತು ನಾಗರಾಜ್ ನಾಯ್ಕ (40) ಬಂಧಿತರು. ವಿದ್ಯುತ್ ಲೈನ್‌ನಿಂದ ನೇರವಾಗಿ ಗದ್ದೆಯ ತಂತಿಬೇಲಿಗೆ ಸಂಪರ್ಕ ಕಲ್ಪಿಸಿದ್ದಾಗಿ … Continue reading *ಬೆಳೆ ಉಳಿಸಲು ಹಾಕಿದ ವಿದ್ಯುತ್ ಬೇಲಿಗೆ ಕಾಡಾನೆ ಸಾವು*: *ತಂದೆ, ಮಗನ ಬಂಧನ*