*ದೇಶದಲ್ಲಿ ನಿರುದ್ಯೋಗ ಪ್ರಮಾಣ ಭಾರಿ ಏರಿಕೆ*

ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿ ನಿರುದ್ಯೋಗ ದರ ಈ ವರ್ಷದ ಏಪ್ರಿಲ್ ನಲ್ಲಿ ಶೇ.5.1ರಷ್ಟಿದ್ದು, ಮೇ ತಿಂಗಳಲ್ಲಿ ಶೇ. 5.6ಕ್ಕೆ ಏರಿಕೆಯಾಗಿದೆ. ಅದರಲ್ಲಿಯೂ ಮಹಿಳೆಯರ ನಿರುದ್ಯೋಗ ದರ ಶೇ.5.8ರಷ್ಟಿದೆ. 15-29 ವಯಸ್ಸಿನವರಲ್ಲಿ ನಿರುದ್ಯೋಗ ದರ ಶೇ.13.8ರಷ್ಟಿದ್ದುದು ಶೇ.15ಕ್ಕೆ ಏರಿಕೆಯಾಗಿದೆ. ನಗರ ಪ್ರದೇಶಗಳಲ್ಲಿರುವ ನಿರುದ್ಯೋಗ ಶೇ.17.2 ರಷ್ಟಿದ್ದುದು ಶೇ.17.9ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ.12.3ರಷ್ಟಿದ್ದುದು ಶೇ13.7ಕ್ಕೆ ಹೆಚ್ಚಳವಾಗಿದೆ.Home add -Advt *ಮತ್ತೊಂದು ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ*