*12 ನಕ್ಸಲರ ಎನ್ಕೌಂಟರ್ ಮಾಡಿದ ಭದ್ರತಾಪಡೆ*

ಪ್ರಗತಿವಾಹಿನಿ ಸುದ್ದಿ : ಛತ್ತೀಸ್‌ಗಢದಲ್ಲಿ ಭಾರತೀಯ ಸೈನ್ಯ ರೋಚಕ ಕಾರ್ಯಚರಣೆ ನಡೆಸಿದೆ.‌ ನಕ್ಸಲರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ 12 ನಕ್ಸಲರ ಹತ್ಯೆ ಮಾಡಲಾಗಿದೆ.  ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ  ಭದ್ರತಾಪಡೆಗಳು 12 ನಕ್ಸಲರನ್ನು ಹತ್ಯೆ ಮಾಡಿದ್ದಾರೆ. ನಕ್ಸಲರು ಹಾಗೂ ಭದ್ರತಾಪಡೆಗಳ ನಡುವಿನ ಗುಂಡಿನ ಚಕಮಕಿ ವೇಳೆ 12 ನಕ್ಸಲರನ್ನು ಸದೆಬಡಿಯಲಾಗಿದೆ. ಕಾರ್ಯಾಚರಣೆ ವೇಳೆ ನಾಲ್ವರು ಯೋಧರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಜಾಪುರದಲ್ಲಿ ಇನ್ನಷ್ಟು ನಕ್ಸಲರು ಅಡಗಿದ್ದು, ಅಡಗಿರುವ ನಕ್ಸಲರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. *ಸಚಿವೆ ಲಕ್ಷ್ಮೀ ಹೆಬ್ಬಾಳಕರ್ … Continue reading *12 ನಕ್ಸಲರ ಎನ್ಕೌಂಟರ್ ಮಾಡಿದ ಭದ್ರತಾಪಡೆ*