*ಮದ್ಯದ ಅಮಲಿನಲ್ಲಿ ದೇವಾಲಯಕ್ಕೆ ನುಗ್ಗಿ ಕೃತ್ಯ*: *ನವಗ್ರಹದ ಒಂಬತ್ತು ವಿಗ್ರಹಗಳೂ ಧ್ವಂಸ, ಆರೋಪಿ ಬಂಧನ*

ಪ್ರಗತಿವಾಹಿನಿ ಸುದ್ದಿ: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ದೇವಾಲಯದಲ್ಲಿದ್ದ ನವಗ್ರಹದ ಒಂಬತ್ತು ವಿಗ್ರಹಗಳನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಬೆಳಗ್ಗೆ ದೇವಾಲಯಕ್ಕೆ ಬಂದ ಅರ್ಚಕರು ವಿಗ್ರಹಗಳು ಹಾನಿಗೊಳಗಾಗಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯಿಂದ ಸ್ಥಳೀಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಮನಗರದ ಕೆಂಪೇಗೌಡ ಸರ್ಕಲ್ ಬಳಿ ಇರುವ ಪ್ರಸಿದ್ಧ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಈ ಕೃತ್ಯ ನಡೆದಿದೆ. ನವಗ್ರಹ ಕಟ್ಟೆಯ ಮೇಲಿದ್ದ ಒಂಬತ್ತೂ ವಿಗ್ರಹಗಳಿಗೆ ಹಾನಿ ಮಾಡಲಾಗಿದೆ. ಮಾಹಿತಿ ತಿಳಿದ ತಕ್ಷಣ ಐಜೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ … Continue reading *ಮದ್ಯದ ಅಮಲಿನಲ್ಲಿ ದೇವಾಲಯಕ್ಕೆ ನುಗ್ಗಿ ಕೃತ್ಯ*: *ನವಗ್ರಹದ ಒಂಬತ್ತು ವಿಗ್ರಹಗಳೂ ಧ್ವಂಸ, ಆರೋಪಿ ಬಂಧನ*