*ತಕ್ಷಣವೇ ದೇಶ ಬಿಟ್ಟು ತೆರಳಿ: ಇರಾನ್ ನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ*

ಪ್ರಗತಿವಾಹಿನಿ ಸುದ್ದಿ: ಇರಾನ್ ನಲ್ಲಿ ಕ್ಷಣ ಕ್ಷಣಕ್ಕೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕರು ತಕ್ಷಣ ಇರಾನ್ ತೊರೆಯುವಂತೆ ಇರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ. ಇರಾನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು, ಯಾತ್ರಾರ್ಥಿಗಳು, ಉದ್ಯಮಿಗಳು, ಹಾಗೂ ಪ್ರವಾಸಿಗರು ಸೇರಿದಂತೆ ಎಲ್ಲಾ ಭಾರತೀಯರು ತಕ್ಷಣ ಲಭ್ಯವಿರುವ ಮಾರ್ಗಗಳ ಮೂಲಕವಾಗಿ ಇರಾನ್ ನಿಂದ ತೆರಳುವಂತೆ ಅಲ್ಲಿರುವ ಭಾರತೀಯ ರಾಯಭಾರ ಕಚೇರಿ ನಿರ್ದೇಶನ ನೀಡಿದೆ. ಭಾರತೀಯ ನಾಗರಿಕರು ಪ್ರತಿಭಟನೆಗಳು ನಡೆಯುತ್ತಿರುವ ಸ್ಥಳಗಳಿಗೆ ಹೋಗಬಾರದು, ಮುಂಜಾಗೃತೆ ವಹಿಸುವಂತೆ ಸೂಚಿಸಲಾಗಿದೆ. … Continue reading *ತಕ್ಷಣವೇ ದೇಶ ಬಿಟ್ಟು ತೆರಳಿ: ಇರಾನ್ ನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ*