*ಸಿದ್ದರಾಮಯ್ಯನವರಿಗೆ ಯಾರಾದ್ರೂ ಮಾಟ-ಮಂತ್ರ ಮಾಡ್ಸಿದಾರಾ? ಯೋಚಿಸ್ತಿದೀನಿ ಎಂದ ರಾಜಣ್ಣ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಹಾಯಕರಲ್ಲ, ಅವರಿಗೂ ಶಕ್ತಿಯಿದೆ. ಆದರೆ ಸಿದ್ದರಾಮಯ್ಯ ಈಗ ಇಷ್ಟೊಂದು ಅಸಹಾಯಕರಾಗಿದ್ದಾರೆ ಎಂದರೆ ಯಾರಾದರೂ ಮಾಟ-ಮಂತ್ರ ಮಾಡಿಸಿದ್ದಾರೇನೋ ಎಂದು ಯೋಚಿಸುತ್ತಿದ್ದೇನೆ ಎಂದು ಶಾಸಕ ಕೆ.ಎನ್.ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಸಿಎಂ ಸಿದ್ದರಾಮಯ್ಯ ಯಾವತ್ತೂ ಇಷ್ಟೊಂದು ಅಸಹಾಯಕರಾಗಿರಲಿಲ್ಲ. ಅವರು ಅಸಹಾಯಕರಾಗಿದ್ದಾರೆ ಎಂಬ ಮಾತುಗಳು ಕೇಳಿದಾಗ ಯಾರಾದರೂ ಸಿದ್ದರಾಮಯ್ಯನವರಿಗೆ ಮಾಟ-ಮಂತ್ರ ಮಾಡಿಸಿದರಾ ಎಂದೆನಿಸುತ್ತಿದೆ ಎಂದರು. ನಾನು ಸಿಎಂ ಸಿದ್ದರಾಮಯ್ಯ ಇಬ್ಬರೂ ಮಾಟ-ಮಂತ್ರ ನಂಬಲ್ಲ. ಗಟ್ಟಿಯಾಗಿ ನಿಲ್ಲಿ ಎಂದು ಹೇಳಿಸಿಕೊಳ್ಳುವಷ್ಟು ಸಿದ್ದರಾಮಯ್ಯ … Continue reading *ಸಿದ್ದರಾಮಯ್ಯನವರಿಗೆ ಯಾರಾದ್ರೂ ಮಾಟ-ಮಂತ್ರ ಮಾಡ್ಸಿದಾರಾ? ಯೋಚಿಸ್ತಿದೀನಿ ಎಂದ ರಾಜಣ್ಣ*