*ಕೋರ್ಟ್ ಗೆ ತೆರಳುವಾಗ ಜಡ್ಜ್ ಹೃದಯಾಘಾತದಿಂದ ಸಾವು*
ಪ್ರಗತಿವಾಹಿನಿ ಸುದ್ದಿ: ಹೃದಯಾಘಾತದಿಂದ ಕಲಬುರಗಿ ಕೋರ್ಟ್ ಜಡ್ಜ್ ನಿಧನರಾಗಿರುವ ಘಟನೆ ನಡೆದಿದೆ. ಜಡ್ಜ್ ವಿಶ್ವನಾಥ್ ಮೂಗತಿ ಹೃದಯಾಘಾತದಿಂದ ನಿಧನರಾದವರು. ಕಲಬುರಗಿ 3ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾಗಿದ್ದರು. ಎಂದಿನಂತೆ ಕೋರ್ಟ್ ಗೆ ಹೋಗಲು ಸಿದ್ಧರಾಗಿದ್ದ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಸ್ಪತ್ರೆಗೆ ತೆರಳುವಷ್ಟರಲ್ಲೇ ವಿಶ್ವನಾಥ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ವಾರವಷ್ಟೇ ವಿಶ್ವನಾಥ್ ಕಲಬುರಗಿ ಕೋರ್ಟ್ ಗೆ ವರ್ಗಾವಣೆಗೊಂಡಿದ್ದರು. *ಮತ್ತೊಂದು ವಿಮಾನ ತುರ್ತು ಭೂಸ್ಪರ್ಶ: ಏನಾಗಿದೆ ಈ ವಿಮಾನಗಳಿಗೆ?*
Copy and paste this URL into your WordPress site to embed
Copy and paste this code into your site to embed