*ಪಡಿತರ ಅಕ್ಕಿ ದಂಧೆ ಕೋರರ ಜೊತೆ ಶಾಮೀಲು: ನಾಲ್ವರು ಪೊಲೀಸರು ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ: ಪಡಿತರ ಅಕ್ಕಿ ದಂಧೆ ಕೋರರ ಜೊತೆಯೇ ಶಾಮೀಲಾಗಿರುವ ಆರೋಪದಲ್ಲಿ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಪಡಿತರ ಅಕ್ಕಿ ಲಾರಿಯನ್ನು ಜಪ್ತಿ ಮಾಡಿದ ನಂತರ ದಂಧೆಕೋರರೊಂದಿಗೆ ಶಾಮೀಲಾಗಿ ವಾಹನ ಬಿಟ್ಟು ಕಳುಹಿಸಿದ ಆರೋಪದಡಿ, ಕಲಬುರಗಿಯ ಆಳಂದ ಪೊಲೀಸ್ ಠಾಣೆಯ ಸಿಪಿಐ ಶರಣಬಸಪ್ಪ ಸೇರಿದಂತೆ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. 112 ಸಿಬ್ಬಂದಿ ವಶಕ್ಕೆ ಪಡೆದು ಆಳಂದ ಟೌನ್ ಠಾಣೆಗೆ ಒಪ್ಪಿಸಿದ್ದ ಅಕ್ಕಿ ಲಾರಿಯನ್ನು ಕಳುಹಿಸಿಕೊಡಲು ಆರೋಪಿಗಳ ಜತೆ ಡೀಲ್ … Continue reading *ಪಡಿತರ ಅಕ್ಕಿ ದಂಧೆ ಕೋರರ ಜೊತೆ ಶಾಮೀಲು: ನಾಲ್ವರು ಪೊಲೀಸರು ಸಸ್ಪೆಂಡ್*